Latest Posts

2019 ರಲ್ಲಿ ಪ್ಲಾಪ್ ಆಗಿದ್ದ ಮೋದಿ ಸಿನಿಮಾ ಮತ್ತೆ ಥಿಯೇಟರ್‌ಗೆ

ಮುಂಬೈ: 2019ರಲ್ಲಿ ಬಿಡುಗಡೆಯಾಗಿ ನಿರೀಕ್ಷಿತ ಯಶಸ್ಸು ಕಾಣದ ವಿವೇಕ್ ಒಬೆರಾಯ್ ಅಭಿನಯದ ಪ್ರಧಾನಿ ಮೋದಿ ಜೀವನಾಧಾರಿತ ‘’ಪಿಎಂ ನರೇಂದ್ರ ಮೋದಿ” ಚಿತ್ರ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಕೋವಿಡ್ ಕಾರಣದಿಂದ ಸುಮಾರು ಆರು ತಿಂಗಳ ಕಾಲ ಮುಚ್ಚಿದ್ದ ಚಿತ್ರಮಂದಿರಗಳನ್ನು ಅಕ್ಟೋಬರ್ 15ರಿಂದ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. 

ಪಿಎಂ ಮೋದಿ ಜೀವನಾಧಾರಿತ ಚಿತ್ರ 2019ರಲ್ಲಿ ಬಿಡುಗಡೆಯಾಗಿತ್ತು. ಒಮಾಂಗ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಮೋದಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ದರು. ಉಳಿದಂತೆ ಬೊಮಾನ್ ಇರಾನಿ, ದರ್ಶನ್ ಕುಮಾರ್, ಮನೋಜ್ ಜೋಶಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದರು.

Share this on:
error: Content is protected !!