ಅಸ್ಸಾಂ: ಅಸ್ಸಾಂನಲ್ಲಿರುವ ಎಲ್ಲಾ ಸರ್ಕಾರಿ ಮದರಸಾಗಳನ್ನು,ಸಂಸ್ಕೃತ ಶಾಲೆಗಳನ್ನು ರಾಜ್ಯ ಸರ್ಕಾರ ಮುಚ್ಚಲಿದೆ ಎಂದು ಅಸ್ಸಾಂ ಸಚಿವ ಹಿಮಾಂತ ಬಿಶ್ವಾ ಶರ್ಮಾ ಹೇಳಿದ್ದಾರೆ.ಈ ನಿಟ್ಟಿನಲ್ಲಿ ಮುಂದಿನ ತಿಂಗಳು ಅಧಿಸೂಚನೆ ಹೊರಡಿಸಲಾಗುವುದು ಎಂದು ಶರ್ಮಾ ತಿಳಿಸಿದ್ದಾರೆ. ಸಾರ್ವಜನಿಕ ಹಣದಿಂದ ಧಾರ್ಮಿಕ ಶಿಕ್ಷಣವನ್ನು ನಡೆಸಲು ಅನುಮತಿಸಲಾಗುವುದಿಲ್ಲ ಎಂದು ಆರೋಪಿಸಿ ಮದರಸಾಗಳನ್ನು ಮುಚ್ಚಲು ಬಿಜೆಪಿ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಆದರೆ, ಸಚಿವರ ಹೇಳಿಕೆ ಹೊರಬಂದ ಸ್ವಲ್ಪ ಸಮಯದ ನಂತರ,ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮದರಸಾಗಳನ್ನು ಮುಚ್ಚುವುದಾದರೆ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಾಗ ಮದರಸಾಗಳು ಮತ್ತೆ ತೆರೆಯಲ್ಪಡುತ್ತವೆ ಎಂದು ಎಯುಯುಡಿಎಫ್ ಮುಖ್ಯಸ್ಥ ಮತ್ತು ಲೋಕಸಭಾ ಸಂಸದ ಬದ್ರುದ್ದೀನ್ ಅಝ್ಮಲ್ ಹೇಳಿದರು.
ಅಸ್ಸಾಂನಲ್ಲಿ 614 ಸರ್ಕಾರಿ ಮದ್ರಸಗಳು ಮತ್ತು ಸುಮಾರು 900 ಖಾಸಗಿ ಮದ್ರಸಗಳಿವೆ. ಇದೆಲ್ಲವನ್ನೂ ಜಂಇಯ್ಯತ್ ಉಲಮಾ ನಡೆಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ರಾಜ್ಯ ಮದ್ರಸಾ ಶಿಕ್ಷಣ ಮಂಡಳಿಯನ್ನು ರಾಜ್ಯ ಸರ್ಕಾರ ರದ್ದುಪಡಿಸಿ ಮದ್ರಸಾಗಳನ್ನು ಸೆಕೆಂಡರಿ ಶಿಕ್ಷಣ ಮಂಡಳಿ ಅಸ್ಸಾಂ (ಸೆಬಾ) ಅಡಿಯಲ್ಲಿ ತರಲಾಗಿತ್ತು.