ಚಂಡೀಗಡ್: ಮೋದಿ ಸರ್ಕಾರ ಜಾರಿಗೆ ತಂದ ಹೊಸ ಕೃಷಿ ಕಾನೂನಿನ ವಿರುದ್ಧ ದೇಶದಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ.ಹೊಸ ಕೃಷಿ ಕಾನೂನು ರೈತನನ್ನು ನಾಶಪಡಿಸುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ವಿರೋಧ ಪಕ್ಷಗಳ ಸಕ್ರಿಯ ಪಾಲ್ಗೊಳ್ಳುವಿಕೆ ಈ ವಿಷಯವನ್ನು ದೇಶಾದ್ಯಂತ ಚರ್ಚಿಸುವಂತೆ ಮಾಡಿತು.ಮಸೂದೆಯನ್ನು ಬೆಂಬಲಿಸಿದ ರಾಜಕೀಯ ಪಕ್ಷಗಳನ್ನು ಬಹಿಷ್ಕರಿಸುವುದು ರೈತರ ನಡೆಯಾಗಿದೆ ಎಂದು ಗ್ರಾಮಸ್ಥರು ಹೇಳಿದರು.
ಫತ್ತೇಬಾದ್ ಜಿಲ್ಲೆಯ ಅಹೆರ್ವಾನ್, ಭಾನಿ ಹಾಗೂ ಖೇರಾ ಗ್ರಾಮಗಳ ರೈತರು ಬಿಜೆಪಿಗರನ್ನು ನಿಷೇಧಿಸಿದೆ. ಅಂಬಾಲಾ ಜಿಲ್ಲೆಯ ಬರೋಲಾ ಗ್ರಾಮಸ್ಥರೂ ಇದೇ ರೀತಿಯ ನಿರ್ಧಾರ ಕೈಗೊಂಡಿದ್ದಾರೆ. ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರು ಆಯೋಜಿಸಿದ್ದ ರಾಹುಲ್ ಗಾಂಧಿಯವರ ಟ್ರ್ಯಾಕ್ಟರ್ ರ್ಯಾಲಿ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ರಾಹುಲ್ ಗಾಂಧಿಯವರ ಟ್ರಾಕ್ಟರ್ ರ್ಯಾಲಿ ಗೆ ಅನೇಕ ರೈತರು ಸಾಲುಗಟ್ಟಿ ನಿಂತಿದ್ದರು.