ಪಾಟ್ನಾ: ಬಿಹಾರದಲ್ಲಿ, ತನ್ನ ಮಗನೊಂದಿಗೆ ಬ್ಯಾಂಕ್ಗೆ ಹೋಗುತ್ತಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಐದು ವರ್ಷದ ಬಾಲಕನೊಂದಿಗೆ ನದಿಗೆ ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಿಹಾರದ ಬಕ್ಸಾರ್ ಜಿಲ್ಲೆಯ ಓಜಾ ಬ್ಯಾರನ್ ಗ್ರಾಮದಲ್ಲಿ ಈ ದುರಂತ ನಡೆದಿದೆ.
ತಾಯಿ ಮತ್ತು ಆಕೆಯ ಮಗು ಹತ್ತಿರದ ಬ್ಯಾಂಕ್ಗೆ ತೆರಳುತ್ತಿದ್ದಾಗ ಗುಂಪೊಂದು ಅವರನ್ನು ಅಪಹರಿಸಿದೆ. ನಂತರ ಮಹಿಳೆಯನ್ನು ಸಾಮೂಹಿಕ ಅತ್ಯಾಚಾರ ನಡೆಸಿ, ತಾಯಿ ಮತ್ತು ಐದು ವರ್ಷದ ಮಗುವನ್ನು ಕಟ್ಟಿ ನದಿಗೆ ಎಸೆಯಲಾಗಿದೆ.
ಇಬ್ಬರ ಕಿರುಚಾಟ ಕೇಳಿ ಸ್ಥಳೀಯರು ರಕ್ಷಣೆಗೆ ಬಂದಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳೀಯರು ಮಹಿಳೆಯನ್ನು ರಕ್ಷಿಸಿದರೂ ಐದು ವರ್ಷದ ಮಗು ಮೃತಪಟ್ಟಿದೆ. ಮಗುವಿನ ಮರಣೋತ್ತರ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ಆರಂಭಿಸಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.