ಅಲಿಘಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಮುಖಂಡ ಮಷ್ಕೂರ್ ಅಹ್ಮದ್ ಉಸ್ಮಾನಿಯನ್ನು ಕಾಂಗ್ರೆಸ್ ಕಣಕ್ಕಿಳಿಸುತ್ತಿದೆ.
ಪಾಟ್ನಾ: ಪೌರತ್ವ ಪ್ರತಿಭಟನೆ ನಡೆಸಿದ ಯುವನಾಯಕನನ್ನು ಚುನಾವಣೆಯಲ್ಲಿ ನಿಲ್ಲಿಸಲು ಕಾಂಗ್ರೆಸ್ ನಿರ್ಧರಿಸಿದೆ.ಅಲಿಘಡ್ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಮಾಜಿ ಮುಖಂಡ ಮಶೂರ್ ಅಹ್ಮದ್ ಉಸ್ಮಾನಿಯನ್ನು ಕಾಂಗ್ರೆಸ್ ಕಣಕ್ಕಿಳಿಸುತ್ತಿದೆ.
ಪಕ್ಷವು ಅವರ
ಉಮೇದುವಾರಿಕೆಯನ್ನು ಅಧಿಕೃತವಾಗಿ ಘೋಷಿಸಿಲ್ಲ.
ಧರ್ಭಂಗಾ ಮೂಲದ ಉಸ್ಮಾನಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ಸಿ ವಿರುದ್ಧ ಪ್ರಭಲವಾಗಿ ಹೋರಾಟಮಾಡಿದ ಯುವ ನಾಯಕರಾಗಿದ್ದಾರೆ.
2017 ರ ಡಿಸೆಂಬರ್ನಲ್ಲಿ ಅವರು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು.
ಅಜಯ್ ಸಿಂಗ್ ಅವರನ್ನು 6179 ಮತಗಳ ಬಹುಮತದಿಂದ ಸೋಲಿಸಿದ್ದರು.
ಪೌರತ್ವನಾಗರಿಕ ಪ್ರತಿಭಟನಾ ನಾಯಕರಾದ ಸಫೂರಾ ಝರ್ಗರ್ ಮತ್ತು ಮೀರನ್ ಹೈದರ್ ಅವರ ಬಂಧನದ ವಿರುದ್ಧ ಉಗ್ರವಾಗಿ ಉಗ್ರ ಹಿಂದುತ್ವ ರಾಜಕಾರಣದ ವಿರುದ್ದ ತೀವ್ರ ಟೀಕಾಕಾರರಾಗಿ ಮೂಡಿಬಂದರು.
ಈ ಮಧ್ಯೆ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಲಾಗಿತ್ತು.
ಕಾಂಗ್ರೆಸ್ ತನ್ನ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಅಕ್ಟೋಬರ್ 7 ರಂದು ಬಿಡುಗಡೆ ಮಾಡಿತ್ತು.
ಈ ಪಟ್ಟಿಯಲ್ಲಿ ಏಳು ರಜಪೂತರು, ನಾಲ್ಕು ಭೂಮಿಹಾರ್, ನಾಲ್ಕು ದಲಿತರು ಮತ್ತು ಇಬ್ಬರು ಬ್ರಾಹ್ಮಣರು ಸೇರಿದ್ದಾರೆ.
ಮೊದಲ ಪಟ್ಟಿಯಲ್ಲಿ ಒಬ್ಬ ಮಹಿಳೆ ಮಾತ್ರ ಇದ್ದಾಳೆ.
ಉಸ್ಮಾನಿ ಅವರ ಉಮೇದುವಾರಿಕೆಯು ಮುಸ್ಲಿಂ ಮತ ಬ್ಯಾಂಕಿನ ಮೇಲೆ ಪ್ರಭಾವ ಬೀರುತ್ತದೆ ಎಂದು ಕಾಂಗ್ರೆಸ್ ನಂಬಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ ಮುಸ್ಲಿಮರು ಸಕ್ರಿಯವಾಗಿ ಪ್ರತಿಭಟನೆ ನಡೆಸಿದ್ದರು.