Latest Posts

ಸರ್ಕಾರಿ ಉದ್ಯೋಗವನ್ನು ದೋಚಲು ತಂದೆಯನ್ನೇ ಕೊಲೆ ಮಾಡಲು ಯತ್ನಿಸಿದ ಮಗನ ಬಂಧನ

ಜೈಪುರ: ಸರ್ಕಾರಿ ಕೆಲಸ ದೋಚಲು ತಂದೆಯನ್ನು ಕೊಲ್ಲಲು ಯತ್ನಿಸಿದ್ದ ಮಗನನ್ನು ಬಂಧಿಸಲಾಗಿದೆ.  ಅಂಕಿತ್ ಪಾಲಿವಾಲ್ (28) ಮತ್ತು ಆತನ ಸ್ನೇಹಿತ ನಿಖಿಲ್ ಅವರನ್ನು ಅಂಕಿತ್ ತಂದೆಯನ್ನು ಕೊಲ್ಲಲು ಯತ್ನಿಸಿದ್ದಕ್ಕಾಗಿ ಬಂಧಿಸಲಾಯಿತು.


ಶಾಲಾ ಶಿಕ್ಷಕ ರಾಕೇಶ್ ಪಾಲಿವಾಲ್ ಅವರು ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಕಲ್ಲು ಎಸೆದು ಕೊಲೆ ಮಾಡಲು ಯತ್ನಿಸಿದರು ಎಂಬುದಾಗಿದೆ ಅವರ ಮಗನ ಮೇಲಿನ ಆರೋಪ.  ರಾಕೇಶ್ ಹೆಲ್ಮೆಟ್ ಧರಿಸಿದ್ದರಿಂದ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಪೊಲೀಸರ ಪ್ರಕಾರ, ಇಬ್ಬರು ಆರೋಪಿಗಳು ರೆಸ್ಟೋರೆಂಟ್ ಪ್ರಾರಂಭಿಸಲು ಹಣ ಪಾವತಿಸಲು ವಿಫಲವಾದ ನಂತರ ಅಂಕಿತ್ ತನ್ನ ತಂದೆಯನ್ನು ಕೊಲ್ಲುವ ಸಂಚು ಮಾಡಿದ್ದಾರೆ.   ಅಂಕಿತ್ ಅವರ ಪ್ರೇಮ ಸಂಬಂಧವನ್ನು ತಂದೆ ಒಪ್ಪಲಿಲ್ಲ ಇದು ಕೂಡ ಅವರಲ್ಲಿ ದ್ವೇಷವನ್ನು ಉಂಟುಮಾಡಿದೆ ಎಂದು  ಆರೋಪಿಗಳು ಒಪ್ಪಿಕೊಂಡಿದ್ದಾರೆ.

Share this on:
error: Content is protected !!