Latest Posts

ಬಿಹಾರ ಚುನಾವಣೆ ಸೃಷ್ಟಿಸಿದ 160 ಟನ್ ತ್ಯಾಜ್ಯ!

ಕೊರೊನಾ ಮಾರ್ಗಸೂಚಿಯನ್ವಯ ಇತ್ತೀಚೆಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆ ವೇಳೆ ಬರೋಬ್ಬರಿ 160 ಟನ್‌ಗಳಷ್ಟು ಜೈವಿಕವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಕೈಗವಸುಗಳು, ಮಾಸ್ಕಳು, ಸ್ಯಾನಿಟೈಸರ್‌ ಬಾಟಲಿಗಳ ರೂಪದಲ್ಲಿ ಈ ಬಯೋಮೆಡಿಕಲ್ ತ್ಯಾಜ್ಯ ಉತ್ಪತ್ತಿಯಾಗಿವೆ. ಮತದಾರರು, ಚುನಾವಣಾ ಸಿಬ್ಬಂದಿ, ಭದ್ರತಾ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಚುನಾವಣಾ ಆಯೋಗವು ಸೂಕ್ತ ಕ್ರಮ ಕೈಗೊಂಡಿತ್ತು. ಇವಿಎಂ ಗುಂಡಿ ಒತ್ತಲು ಮತದಾರರಿಗೂ ಬಳಸಿ ಬಿಸಾಕಬಹುದಾದ ಕೈಗವಸುಗಳನ್ನು ಒದಗಿಸಿತ್ತು. ಜತೆಗೆ, ಸಿಬ್ಬಂದಿಗೆಂದೇ ಫೇಸ್‌ಶೀಲ್, ಮಾಸ್ಕಳನ್ನೂ ನೀಡಿತ್ತು. ಇದರ ಪರಿಣಾಮವಾಗಿ 160 ಟನ್‌ಗಳಷ್ಟು ಬಯೋಮೆಡಿಕಲ್ ಹೇಳಲಾಗಿದೆ. ‘ತ್ಯಾಜ್ಯ ಸೃಷ್ಟಿಯಾಗಿದೆ ಎಂದು ಮೂಲಗಳಿಂದ ವರದಿಯಾಗಿದೆ

ಖರೀದಿಸಿದ್ದ ವಸ್ತುಗಳಿವು

ಫೇಸ್‌ಶೀಲ್ಡ್ 18 ಲಕ್ಷ
ಮಾಸ್ಕುಗಳು 70ಲಕ್ಷ
ರಬ್ಬರ್ ಗ್ಲೌಸ್ 5.4 ಲಕ್ಷ
ಪಾಲಿಥೀನ್ ಗ್ಲೌಸ್ 7.21 ಕೋಟಿ
ಸ್ಯಾನಿಟೈಸರ್‌ 29 ಲಕ್ಷ
ಉತ್ಪತ್ತಿಯಾದ ತ್ಯಾಜ್ಯ 160ಟನ್

Share this on:
error: Content is protected !!