ಮುಸ್ಲಿಂ ಲೀಗ್ ಮಾಜಿ ಶಾಸಕ ಇಬ್ರಾಹಿಂ ಕುಂಞಿ ಯ ಬಂಧನ ಖಂಡಿಸದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ
ತಿರುವನಂತಪುರಂ: ಪಲಾರಿವಟ್ಟಂ ಪ್ರಕರಣದಲ್ಲಿ ಮಾಜಿ ಸಚಿವ ವಿ.ಕೆ. ಇಬ್ರಾಹಿಂ ಕುಂಞಿ ಯನ್ನು ಬಲಿಪಶು ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದ್ದಾರೆ. ಇಬ್ರಾಹಿಂ ಕುಂಞಿಯ ಬಂಧನ ಕುರಿತು ಮಾಧ್ಯಮ ವರದಿಗಳಿಗೆ ಈ ರೀತಿ ಪ್ರತಿಕ್ರಿಯಿಸಿದರು. ಇಂದು ಬೆಳಿಗ್ಗೆ ಲೇಕ್ ಶೋರ್ ಆಸ್ಪತ್ರೆಯಲ್ಲಿ ಸಚಿವರನ್ನು ವಿಜಿಲೆನ್ಸ್ ಅಧಿಕಾರಿಗಳು ಬಂಧಿಸಿದ್ದರು.
ಮುಸ್ಲಿಂ ಲೀಗ್ ಕೂಡ ಬಂಧನದ ವಿರುದ್ಧವಾಗಿ ವಿರೋಧಿಸಿದೆ. ಈ ಪ್ರಕರಣದಲ್ಲಿ ಎಲ್ಲ ಮಾನದಂಡಗಳನ್ನು ಉಲ್ಲಂಘಿಸಿ ಬಂಧನಕ್ಕೊಳಗಾಗಿದ್ದಾರೆ ಮತ್ತು ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಇಬ್ರಾಹಿಂ ಕುಂಞಿ ಯನ್ನು ಬಂಧಿಸಲು ಪ್ರೇರಣೆ ನೀಡಿದ್ದಾರೆ ಎಂದು ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಸದ ಪಿ. ಕೆ ಕುಂಚ್ಞಾಲಿಕುಟ್ಟಿ ಆರೋಪಿಸಿದರು.
“ಕ್ಷಮಾಪನೆ ಪತ್ರ ಕೊಟ್ಟು ಅದರ ನಷ್ಟ ಭರಿಸುವಂತ ಪ್ರಕರಣವಾಗಿದೆ. ಬಂಧನದ ಅಗತ್ಯವಿಲ್ಲದ ಪ್ರಕರಣದಲ್ಲಿ ಅವರು ಪ್ರಸ್ತುತ ಅನ್ಯಾಯವಾಗಿ ಬಂಧನದಲ್ಲಿದ್ದಾರೆ. ತನಿಖೆ ಮಾಡಿ ಬಿಟ್ಟು ಕೆಲವು ಸಮಯದ ನಂತರ ಬಂಧಿಸಲಾಗಿದೆ.
ಯುಡಿಎಫ್ (ಕಾಂಗ್ರೆಸ್) ಸರ್ಕಾರ ಅಧಿಕಾರದಲ್ಲಿದ್ದಾಗ ಇಂತಹ ಅನೇಕ ಸಂದರ್ಭಗಳಲ್ಲಿ ಹಾಗೆ ಮಾಡಬಹುದಿತ್ತು. ಆದರೆ ಮಾಡಿಲ್ಲ. ಪ್ರಕರಣದ ಅರ್ಹತೆಯ ಮೇರೆಗೆ ಮಾತ್ರ ಬಂಧನ ಮಾಡಬೇಕು ಎಂಬ ನಿಲುವು ಇತ್ತು. ಆದರೆ ಎಲ್ಡಿಎಫ್ (ಸಿಪಿಎಂ) ಸರ್ಕಾರದ ವಿರುದ್ಧದ ಪ್ರಕರಣಗಳನ್ನು ಸಮತೋಲನಗೊಳಿಸಲು ಪಾಲರಿವಟ್ಟಂ ಪ್ರಕರಣವನ್ನು ತರಲಾಗುತ್ತಿದೆ. ಹಾಗೂ ಇದೆಲ್ಲವೂ ಚುನಾವಣೆಗೆ ಮಾಡುವ ನಾಟಕೀಯ ತಯಾರಿಯಲ್ಲಿ ಇದು ಕೂಡ ಒಂದು ಭಾಗ ಎಂದು ಹೇಳಿದರು.