Latest Posts

ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ; ಕಾಸರಗೋಡು ಜಿಲ್ಲೆಯಲ್ಲಿ 5,392 ನಾಮಪತ್ರ ಸಲ್ಲಿಕೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಡಿ .14 ರಂದು ನಡೆಯುವ ಚುನಾವಣೆಗೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 5,392 ನಾಮಪ ಸಲ್ಲಿಕೆಯಾಗಿದೆ . ನಾಮಪತ್ರ ಸಲ್ಲಿಕೆಗೆ ಇಂದು ಅಂತಿಮ ದಿನವಾಗಿತ್ತು . ನ .20 ರಂದು ನಾಮಪತ್ರಗಳ ಸೂಕ್ಷ್ಮಪರಿಶೀಲನೆ ನಡೆಯಲಿದೆ ಜಿಲ್ಲಾ ಪಂಚಾಯತ್‌ನ 17 ವಾರ್ಡ್‌ಗಳಿಗೆ 137 , ಮೂರು ನಗರ ಸಭೆಗಳಿಗೆ 708 , ಆರು ಬ್ಲಾಕ್ ಪಂಚಾಯತ್‌ಗಳಿಗೆ 487 , 38 ಗ್ರಾಮ ಪಂಚಾಯತ್‌ಗಳಿಗೆ 4,060 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಹಿಂಪಡೆಯಲು ನ .23 ಕೊನೆಯ ದಿನವಾಗಿದೆ . ನಗರಸಭೆಗಳಲ್ಲಿ ನೀಲೇಶ್ವರ 54 , ಕಾಞಂಗಾಡ್ 159 , ಕಾಸರಗೋಡು 87 , ಬ್ಲಾಕ್ ಪಂಚಾಯತ್‌ಗಳಲ್ಲಿ ನೀಲೇಶ್ವರ 28 , ಕಾಞಂಗಾಡ್ 32 , ಕಾಸರಗೋಡು 64 , ಕಾರಡ 44 , ಮಂಜೇಶ್ವರ 46 , ಪರಪ್ಪದಲ್ಲಿ 39 ಮಂದಿ ನಾಮಪತ್ರ ಸಲ್ಲಿಸಿದ್ದಾರೆ .

Share this on:
error: Content is protected !!