Latest Posts

ವಾಯುಮಾಲಿನ್ಯ ಸಮಸ್ಯೆ : ಗೋವಾಕ್ಕೆ ಆಗಮಿಸಿದ ಸೋನಿಯಾ ಗಾಂಧಿ

ಪಣಜಿ: ರಾಜಧಾನಿ ದೆಹಲಿಯಲ್ಲಿನ ವಿಪರೀತ ವಾಯುಮಾಲಿನ್ಯ ಸಮಸ್ಯೆಯಿಂದಾಗಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಗೋವಾಕ್ಕೆ ಆಗಮಿಸಿದ್ದಾರೆ.

ವಾಯು ಮಾಲಿನ್ಯ ಕಡಿಮೆ ಇರುವ ಪ್ರದೇಶದಲ್ಲಿ ಸಮಯ ಕಳೆಯುವಂತೆ ಹಿಂದೆ ವೈದ್ಯರು ಸಲಹೆ ನೀಡಿದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಪಣಜಿಗೆ ಆಗಮಿಸಿದ್ದಾರೆ.

ಆಗಸ್ಟ್ ತಿಂಗಳಿನಲ್ಲಿ ಸೋನಿಯಾ ಗಾಂಧಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಹೆಚ್ಚಿನ ರೀತಿಯ ವೈದ್ಯಕೀಯ ನಿಗಾವಣೆಯಲ್ಲಿದ್ದು, ಅವರ ನಿರಂತರ ಎದೆ ಸೋಂಕಿನ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ ಗೋವಾಕ್ಕೆ ಬಂದಿದ್ದಾರೆ, ದೆಹಲಿಯಲ್ಲಿನ ಮಾಲಿನ್ಯದ ಕಾರಣ ಅಲ್ಲ ಎಂದು ಮೂಲಗಳು ತಿಳಿಸಿವೆ.

Share this on:
error: Content is protected !!