Latest Posts

ಅಮಿತ್ ಶಾ ಮೇಲೆ ಫಲಕ ಎಸೆತ ಆತಂಕದ ವಾತವರಣ ಸೃಷ್ಟಿ

ಚೆನ್ನೈ: ಚೆನ್ನೈಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಎಐಎಡಿಎಂಕೆ ಮತ್ತು ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು. ಆದರೆ ಈ ವೇಳೆ ವ್ಯಕ್ತಿಯೊಬ್ಬ ಅಮಿತ್ ಶಾ ಮೇಲೆ ಫಲಕ ಎಸೆದಿದ್ದು, ಕೆಲ ಕಾಲ ಆತಂಕದ ವಾತವರಣ ಸೃಷ್ಟಿಯಾಯಿತು

ನಗರಕ್ಕೆ ಭೇಟಿ ನೀಡಿದ ಅಮಿತ್ ಶಾ ಅವರು ವಿಮಾನ ನಿಲ್ದಾಣದ ಬಳಿ ತಮ್ಮನ್ನು ಸ್ವಾಗತಿಸಲು ಬಂದ ಪ್ರೇಕ್ಷಕರಿಗೆ ಶುಭಾಶಯ ಕೋರಲು ವಾಹನದಿಂದ ಕೆಳಗೆ ಇಳಿದಿದ್ದರು. ಈ ವೇಳೆ 60 ವರ್ಷದ ವ್ಯಕ್ತಿಯೊಬ್ಬರು ಅಮಿತ್ ಶಾ ಮೇಲೆ ಫಲಕ ಎಸೆದಿದ್ದು, ಅದೃಷ್ಟವಶಾತ್ ಅದು ಅಮಿತ್ ಶಾ ಅವರಿಗೆ ತಗುಲಿಲ್ಲ. ಪ್ಲೇಕಾರ್ಡ್ ಎಸೆದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ದುರೈರಾಜ್ ಎಂದು ಗುರುತಿಸಲಾಗಿದೆ.

ಅಮಿತ್ ಶಾ ಅವರು ಹೋಟೆಲ್‌ಗೆ ತೆರಳುತ್ತಿದ್ದ ವೇಳೆ ದುರೈರಾಜ್ ಅವರು ತಮ್ಮ ಕೈಯಲ್ಲಿದ್ದ ಫಲಕವನ್ನು ಎಸೆದಿದ್ದಾರೆ. ಆದರೆ ಅದನ್ನು ಸಶಸ್ತ್ರ ಮೀಸಲು ಪಡೆಯ ಪೊಲೀಸರು ತಡೆದರು ಎಂದು ತಿಳಿಸಿದ್ದಾರೆ.

Share this on:
error: Content is protected !!