Latest Posts

ಆತ್ಮಹತ್ಯೆ ಮಾಡಲೂ ಸಿದ್ದ ಬಿಜೆಪಿ ಸೇರಲಾರೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಐವರು ತೃಣಮೂಲ ಕಾಂಗ್ರೆಸ್ ಸಂಸದರು ಪಕ್ಷಕ್ಕೆ ರಾಜಿನಾಮೆಕೊಟ್ಟು ಬಿಜೆಪಿಗೆ ಬರಲಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಟಿಎಂಸಿ ಸಂಸದ ಸೌಗತ ರಾಯ್ ಖಡಕ್ ಉತ್ತರ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಹೇಳಿಕೆ ನೀಡಿ ಟಿಎಂಸಿ ಪಕ್ಷದ ಅನುಭವಿ ಸೌಗತ ರಾಯ್ ಸೇರಿದಂತೆ ದೊಡ್ಡ ನಾಯಕರೇ ಯಾವುದೇ ಕ್ಷಣದಲ್ಲಿ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಬಹು ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದರು .

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಸೌಗತ ರಾಯ್, ಇದೊಂದು ಬಿಜೆಪಿ ಪ್ರಚಾರದ ಕಲೆ. ಅರ್ಜುನ್ ಸಿಂಗ್ ಈ ರೀತಿ ಆರೋಪಿಸುವುದರಲ್ಲಿ ಪ್ರಸಿದ್ಧ. ನಾನು ರಾಜಕೀಯ ತೊರೆದು ಸಾಯಲು ಸಿದ್ಧ ಆದರೆ, ಎಂದಿಗೂ ಬಿಜೆಪಿಗೆ ಸೇರುವುದಿಲ್ಲ ಅವರ ಜೊತೆ . ಕೈ ಜೋಡಿಸುವುದಿಲ್ಲ. ಮೇಲಾಗಿ ನಾನು ಕುದುರೆ ವ್ಯಾಪಾರದ ಸರಕು ಅಲ್ಲ ಎಂದೂ ಅವರು ಪ್ರತ್ಯುತ್ತರ ನೀಡಿದ್ದಾರೆ.

Share this on:
error: Content is protected !!