Latest Posts

ಚಳಿಗೆ ತತ್ತರಿದ ದೆಹಲಿ

ನವದೆಹಲಿ: ತೀವ್ರ ಚಳಿಗೆ ರಾಷ್ಟ್ರ ರಾಜಧಾನಿ ದೆಹಲಿ ಜನತೆ ತತ್ತರಿಸಿ ಹೋಗಿದೆ, ಇಂದು ದೆಹಲಿಯಲ್ಲಿ ಕಳೆದ 17 ವರ್ಷಗಳಲ್ಲಿಯೇ ಕನಿಷ್ಠ ತಾಪಮಾನ ದಾಖಲಾಗಿದೆ.

ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ದೆಹಲಿಯಲ್ಲಿ ಭಾನುವಾರ ಮುಂಜಾನೆ ಕನಿಷ್ಠ ತಾಪಮಾನ 6.9 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಇದು 2003ರ ಬಳಿಕ ನವೆಂಬರ್‌ ತಿಂಗಳಲ್ಲಿ ದಾಖಲಾದ ಅತಿ ಕನಿಷ್ಠ ತಾಪಮಾನವಾಗಿದೆ ಎಂದು ಹೇಳಿದೆ.

ದೆಹಲಿಯಲ್ಲಿ ಕಳೆದ ಶುಕ್ರವಾರ 7.5 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿತ್ತು. ಅದು 14 ವರ್ಷಗಳಲ್ಲಿ ನವೆಂಬರ್‌ ತಿಂಗಳಲ್ಲಿ ದಾಖಲಾದ ಅತಿ ಕನಿಷ್ಠ ಉಷ್ಣಾಂಶ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿತ್ತು. ಆದರೆ ಇಂದು ಅದಕ್ಕಿಂತಲೂ ಕನಿಷ್ಛ ತಾಪಮಾನ ದಾಖಲಾಗಿದೆ

Share this on:
error: Content is protected !!