ಜನನಾಯಕ ಕೆ.ಎಂ. ಶರೀಫ್ ನಿಧನಕ್ಕೆ “ಯುನಿವೆಫ್ ಕರ್ನಾಟಕ” ತೀವ್ರ ಸಂತಾಪ

ಸಾಮಾಜಿಕ ರಂಗದಲ್ಲಿ ಕಳೆದ ಅನೇಕ ದಶಕಗಳಿಂದ ಸಕ್ರಿಯರಾಗಿದ್ದ, ಶೋಷಿತರ ಪರ ಮತ್ತು ಶೋಷಕರ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದ, ಸಾಮಾಜಿಕ ಬದಲಾವಣಿಗೆ ಸರ್ವ ರೀತಿಯಿಂದಲೂ ತಮ್ಮನ್ನು ತೊಡಗಿಸಿಕೊಂಡಿದ್ದ, ವಾಗ್ಮಿಯೂ, ಲೇಖಕರೂ ಮತ್ತು ಸಂಘಟಕರೂ ಆಗಿದ್ದ ಪಿಎಫ್ಐ ಇದರ ಮಾಜಿ ರಾಷ್ಟ್ರಾಧ್ಯಕ್ಷ ಕೆ. ಎಂ. ಶರೀಫ್ ರವರ ನಿಧನಕ್ಕೆ ಯುನಿವೆಫ್ ಕರ್ನಾಟಕ ತೀವ್ರ ಸಂತಾಪವನ್ನು ಸೂಚಿಸುತ್ತದೆ.

ಕೆ.ಎಫ್,ಡಿ. ಎಂಬ ಸಾಮಾಜಿಕ ಸಮಾನತೆಗಾಗಿ ಹೋರಾಡುವ ಸಂಘಟನೆಯಲ್ಲಿ ಗುರುತಿಸಿಕೊಳ್ಳುವ ಮೊದಲೇ ಅವರು ಸಮಾಜದ ಬಗ್ಗೆ ಕಾಳಜಿಯುಳ್ಳವರಾಗಿದ್ದರು. ಸಾಮಾಜಿಕ ಅನಿಷ್ಟಗಳ ವಿರುದ್ಧ ತನ್ನದೇ ಶೈಲಿಯಲ್ಲಿ ನಿರ್ದಿಷ್ಟ ಯೋಜನೆಗಳೊಂದಿಗೆ ಕಾರ್ಯಪ್ರವೃತ್ತರಾಗಿದ್ದರು

ಅನೇಕರಿಗೆ ಮಾರ್ಗದರ್ಶಕರೂ ಆಗಿದ್ದ ಅವರು ಓರ್ವ ಸಮರ್ಥ ಸಂಘಟಕರೂ ಆಗಿದ್ದರು. ತಮ್ಮ ಭಾಷಣ ಮತ್ತು ಲೇಖನಗಳಿಂದ ಯುವ ಸಮೂಹವನ್ನು ಆಕರ್ಷಿಸಿದ್ದ ಅವರು ಅನೇಕ ಯುವಕರ ಭವಿಷ್ಯ ರೂಪೀಕರಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಅವರ ಅಧ್ಯಯನಾತ್ಮಕ ತರಗತಿಗಳು ಮತ್ತು ವಿಮರ್ಶಾತ್ಮಕ ಭಾಷಣಗಳು ಜನರನ್ನು ಚಿಂತಿಸುವಂತೆ ಮಾಡುತ್ತಿತ್ತು. ಭಾಷಣ ಮತ್ತು ಲೇಖನಗಳಲ್ಲಿ ತೀಕ್ಷ್ಣತೆ ಇದ್ದರೂ ವೈಯಕ್ತಿಕವಾಗಿ ಮೃದು ಸ್ವಭಾವದವರಾಗಿದ್ದರು. ಇದು ಹೆಚ್ಚಿನವರನ್ನು ಆಕರ್ಷಿಸುತ್ತಿತ್ತು.

ಮಿತಭಾಷಿ ಮತ್ತು ಸರಳ ಜೀವಿಯಾಗಿದ್ದ ಕೆ. ಎಂ. ಶರೀಫ್ ಯುವಕರಿಗೆ ಸ್ಪೂರ್ತಿ ಮತ್ತು ಮಾದರಿ ಆಗಿದ್ದಾರೆ. ಅವರ ನಿಧನವು ಸಮುದಾಯಕ್ಕೆ ದೊಡ್ಡ ನಷ್ಟವಾಗಿದೆ.

ಯುನಿವೆಫ್ ಕರ್ನಾಟಕ ಅವರ ಅಗಲುವಿಕೆಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ*

Share this on:
error: Content is protected !!