ಗೂಗಲ್ ಉದ್ಯೋಗಿಯೆಂದು ನಂಬಿಸಿ 50 ಯುವತಿಯರ ಮೇಲೆ ಅ ತ್ಯಾ ಚಾ ರ ;ನಕಲಿ ಪಧವೀದರ  ಯುವಕನ ಬಂಧನ

ಅಹಮದಾಬಾದ್: ಗೂಗಲ್ ಉದ್ಯೋಗಿ ಎಂಬ ಸುಳ್ಳು ನೆಪದಲ್ಲಿ ಸುಮಾರು 50 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ವಿಹಾನ್ ಶರ್ಮಾ ಎಂಬ  ವ್ಯಕ್ತಿಯನ್ನು ಬಂಧಿಸಲಾಗಿದೆ.  ಈ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ವಂಚಕ ಐಐಎಂ ಹೈದರಾಬಾದ್‌ನಿಂದ ಪದವಿ ಪಡೆದಿದ್ದು, ಗೂಗಲ್‌ನಲ್ಲಿ ಎಚ್‌ಆರ್ ಮ್ಯಾನೇಜರ್ ಎಂದು ಹೇಳಿಕೊಂಡಿದ್ದಾನೆ.

ಅವರು ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಮಹಿಳೆಯರ ಜೊತೆ ಪರಿಚಯ ಹೊಂದುತ್ತಿದ್ದನು.  ಆತನಿಂದ 30 ಸಿಮ್ ಕಾರ್ಡ್‌ಗಳು, ನಾಲ್ಕು ಮೊಬೈಲ್ ಫೋನ್ ಮತ್ತು ನಾಲ್ಕು ನಕಲಿ ಗುರುತಿನ ಚೀಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಆತ  ವಾರ್ಷಿಕ 40 ಲಕ್ಷ ರೂ ವೇತನ ಪಡೆಯುತ್ತಿರುವುದಾಗಿ ಹೇಳಿ ಮಹಿಳೆಯರನ್ನು ಬುಟ್ಟಿಗೆ ಹಾಕಿಕೊಂಡಿದ್ದಾನೆ.

ಮಹಿಳೆಯರೊಂದಿಗೆ ಸೌಹಾರ್ದಯುತ ದೈಹಿಕ ಸಂಪರ್ಕ ನಡೆಸಿ  ಹಣ ಮತ್ತು ಆಭರಣಗಳೊಂದಿಗೆ ನಾಪತ್ತೆಯಾಗುವುದು ಈತನ ಚಾಳಿ.  ವಿಡಿಯೋ ಚಿತ್ರೀಕರಿಸಿ   ಹುಡುಗಿಯರಿಗೆ ಬೆದರಿಕೆ ಹಾಕುತ್ತಿದ್ದನು.  ಐಐಎಂ ಹೈದರಾಬಾದ್‌ನ ನಕಲಿ ಪದವಿ ಪ್ರಮಾಣಪತ್ರ ಬಳಸಿ ಈ ವಂಚನೆ ಮಾಡಲಾಗಿದೆ.

Share this on:
error: Content is protected !!