Latest Posts

ಉತ್ತರ ಪ್ರದೇಶದ ದೇವಾಲಯದಲ್ಲಿ ನೀರು ಕುಡಿದ ಕಾರಣಕ್ಕಾಗಿ ಅತಿ ಕ್ರೂರವಾಗಿ ಹಲ್ಲೆಗೊಳಗಾದ ಮುಸ್ಲಿಂ ಬಾಲಕ ಆಸಿಫ್ ಮನೆಗೆ ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಭೇಟಿ

ಉತ್ತರ ಪ್ರದೇಶ: ಇಲ್ಲಿನ ಗಾಜಿಯಾಬಾದ್ ದಾಸನ ದೇವಿ ಮಂದಿರ ದೇವಾಲಯದಲ್ಲಿ ನೀರು ಕುಡಿದ ಕಾರಣಕ್ಕಾಗಿ ಸಂಘ ಪರಿವಾರದ ಕಾರ್ಯಕರ್ತನೆನ್ನಲಾದ ಶ್ರಂಗಿ ನಂದನ್ ಯಾದವ್ ಎಂಬ ಮತಾಂಧನಿಂದ ಅತಿ ಕ್ರೂರವಾಗಿ, ನಿರ್ದಯವಾಗಿ ಹಲ್ಲೆಗೊಳಗಾದ ಪುಟ್ಟ ಮುಸ್ಲಿಂ ಬಾಲಕ ಆಸಿಫ್ ನ ಮನೆಗೆ ಇಂದು ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಅವರು ಭೇಟಿ ನೀಡಿದರು.
ಆಸೀಫ್ ಕುಟುಂಬಕ್ಕೆ ಧೈರ್ಯ ತುಂಬಿದ್ದಲ್ಲದೆ ಮುಂದಿನ ಚಿಕಿತ್ಸೆಗಾಗಿ ಎಲ್ಲಾ ರೀತಿಯ ಸಹಾಯ-ಸಹಕಾರ ಹಾಗೂ ಆರ್ಥಿಕವಾಗಿಯೂ,ಕಾನೂನಾತ್ಮಕ ಹೋರಾಟದ ನೆರವು ನೀಡುವ ಭರವಸೆಯನ್ನು ನೀಡಿದರು.

ಹಿಂದೂ ಧರ್ಮ ಕೆಟ್ಟದ್ದಲ್ಲ ಹಾಗೂ ನಮ್ಮ ಭಗವಂತನ ಮಂದಿರಗಳು ಕೆಟ್ಟದ್ದಲ್ಲ, ನಾವು ನಾವು ನೈಜ ಹಿಂದೂಗಳು ಬಾಯಾರಿದವರಿಗೆ ನೀರು ನೀಡುತ್ತೇವೆ, ಹಸಿದವರಿಗೆ ಅನ್ನ ನೀಡುತ್ತೇವೆ, ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತೇವೆ, ಮಾನವೀಯತೆಯ ಪಾಠ ಕಲಿಸುತ್ತೇವೆ.
ಆದರೆ ಕೆಲವು ಮತಾಂಧ ಸಮಾಜಘಾತುಕ ಗೂಂಡಾಗಳು ನಮ್ಮ ಹಿಂದೂ ಧರ್ಮವನ್ನು ಅಪಖ್ಯಾತಿಗೆ ಒಳಪಡಿಸುತ್ತಿರುವುದನ್ನು ನಾವೆಂದಿಗೂ ಸಹಿಸುವುದಿಲ್ಲ‌ ಹಾಗೂ ಅನುಮತಿಸುವುದಿಲ್ಲ.
ಧರ್ಮದ ಹೆಸರಿನಲ್ಲಿ ಈ ಬಾಲಕನಿಗೆ ಸಂಭವಿಸಿದ ಈ ದುಷ್ಕ್ರತ್ಯಕ್ಕೆ ನಾವು ನಾಚಿಕೆಪಡುತ್ತೇವೆ ಎಂಬ ಭಾವನಾತ್ಮಕ ಸಂದೇಶವನ್ನು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Share this on:
error: Content is protected !!