Latest Posts

ಪ್ರತೀ ಶಾಸಕರ 5 ಕೋ.ಅನುದಾನದಲ್ಲಿ 4 ಕೋ.ರೂ ಕೋವಿಡ್ ನಿರ್ವಹಣೆಗೆ ಮೀಸಲಿಟ್ಟ ಕೇರಳ ಸರಕಾರ

ತಿರುವನಂತಪುರಂ: ಶಾಸಕರ ಅಭಿವೃದ್ಧಿ ಅನುದಾನವನ್ನು 1 ಕೋಟಿ ರೂ.ಗೆ ಇಳಿಸಲಾಗಿದೆ. ಐದು ಕೋಟಿಗಳಲ್ಲಿ ನಾಲ್ಕು ಕೋಟಿ ರೂ. ಕೋವಿಡ್ ನಿರ್ವಹಣೆಗೆ ಖರ್ಚು ಮಾಡಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ತಿಳಿಸಿದರು.

ಈ ಹಿಂದೆ ಪ್ರತಿಪಕ್ಷಗಳೊಂದಿಗೆ ನಡೆಸಿದ ಚರ್ಚೆಯಲ್ಲಿ 3 ಕೋಟಿ ಮೀಸಲಿಡುವುದಾಗಿ ನಿರ್ಧರಿಸಲಾಗಿತ್ತು.ಆದರೆ ಹಣಕಾಸಿನ ಕೊರತೆಯಿಂದಾಗಿ ಇದನ್ನು 4 ಕೋಟಿಯಾಗಿ ಏರಿಸಲಾಗಿದೆ.ಈ ಹಣವನ್ನು ರಾಜ್ಯದ ಸಿಎಚ್‌ಸಿ, ತಾಲ್ಲೂಕು, ಜಿಲ್ಲಾ ಮತ್ತು ಸಾಮಾನ್ಯ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ಸ್ಥಾಪಿಸಲು ಬಳಸಲಾಗುತ್ತದೆ.ವಾರ್ಡ್ ಒಂದಕ್ಕೆ ಸುಮಾರು 3 ಕೋಟಿ ರೂ. ವೆಚ್ಚ ಆಗಲಿದೆ.ಇದಕ್ಕಾಗಿ ಬಜೆಟ್ ನಲ್ಲಿ ಒಟ್ಟು 636.5 ಕೋಟಿ ರೂ. ಮೀಸಲಿಡಲಾಗಿತ್ತು.

Share this on:
error: Content is protected !!