Latest Posts

ಬಂಧನ ನಿರೀಕ್ಷಿಸಿದ್ದೇನೆ,ಪಿಣರಾಯಿ ಸರಕಾರದ್ದು ಸೇಡಿನ ರಾಜಕೀಯ – ಬಿಜೆಪಿ ಅಧ್ಯಕ್ಷ ಸುರೇಂದ್ರನ್

ಕೇರಳ: ಚುಣಾವಣೆಯಲ್ಲಿ ಅಕ್ರಮ ನಡೆಸಲು ಲಂಚ ನೀಡಿದ ಪ್ರಕರಣದಲ್ಲಿ ತನ್ನನ್ನು ಬಂಧಿಸುವ ಸಾದ್ಯತೆ ಇದೆ ಎಂದು ಬಿಜೆಪಿ ಕೇರಳ ಅಧ್ಯಕ್ಷ ಸುರೇಂದ್ರನ್ ಹೇಳಿದ್ದಾರೆ.ಬಿಜೆಪಿ ಪಕ್ಷವನ್ನು ಅಪಕೀರ್ತಿಪಡಿಸಲು ಮತ್ತು ಪಕ್ಷದ ಪ್ರಮುಖ ಸ್ಥಾನದಲ್ಲಿ ಇರುವವರನ್ನು ಸರಕಾರ ಗುರಿಯಾಗಿಸಿಕೊಂಡಿದೆ ಎಂದು ಸುರೇಂದ್ರನ್ ಗಂಭೀರ ಆರೋಪ ಮಾಡಿದ್ದಾರೆ.

ಕೊಡಗರ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಿಜೆಪಿಯನ್ನು ಸಿಲುಕಿಸಲು ಎಂದಿಗೂ ಸಾಧ್ಯವಿಲ್ಲ,ನನ್ನನ್ನು ಪೋಲಿಸರು ಬಂಧಿಸಲು ಸಾದ್ಯವಿದೆ.ಈ ಹಿಂದೆ ನನ್ನನ್ನು ಬಂಧಿಸಿದಾಗ ಏನಾಯ್ತು ಎಂಬುದನ್ನು ಪಿಣರಾಯಿ ನೆನಪಿನಲ್ಲಿಟ್ಟುಕೊಳ್ಳುವುದು ಒಳಿತು.ನಾನು ಅದನ್ನು ಎದುರು ನೋಡುತ್ತಿದ್ದೇನೆ.ಬಿಜೆಪಿ ಕಾರ್ಯಕರ್ತರು ಇದನ್ನೆಲ್ಲಾ ನೋಡಿಕೊಂಡೇ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಪೋಲೀಸ್ ದೌರ್ಜನ್ಯ,ಆಕ್ರಮಣಗಳನ್ನು ಎದುರಿಸುತ್ತೇವೆ.ನನಗೆ ಈಗಾಗಲೇ 300ಕ್ಕೂ ಹೆಚ್ಚು ಕೇಸುಗಳಿವೆ ಎಂದರು.

ಮಾಧ್ಯಮಗಳು ಸೇರಿ ನನ್ನನ್ನು ಅಪರಾಧಿಯನ್ನಾಗಿಸುತ್ತಿದೆ.ಮುಖ್ಯಮಂತ್ರಿ ಕಛೇರಿ,ಸಿಪಿಎಂ,ಕೆಲ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಸೃಷ್ಟಿಸುತ್ತಿವೆ.ಮಂಜೇಶ್ವರ ಸುಂದರ ನನ್ನು ನಾನು ನೊಡಿಲ್ಲ,ಮಾತನಾಡಿಲ್ಲ.ಕಾನೂನು ಪ್ರಕಾರ ಲಂಚ ನೀಡಿದವನು ಪಡೆದವನೂ ತಪ್ಪಿತಸ್ಥರು ಎಂದು ಸುರೇಂದ್ರನ್ ಹೇಳಿದರು.

Share this on:
error: Content is protected !!