Latest Posts

ಮೋದಿ ದೇಶದ ಅತ್ಯುನ್ನತ ನಾಯಕ; ಪಿಎಂ ಅವರನ್ನು ಹೊಗಳಿದ ಶಿವಸೇನೆ ಮುಖಂಡ

ಮಹಾರಾಷ್ಟ್ರ: ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ.ನರೇಂದ್ರ ಮೋದಿ ದೇಶದ ಪ್ರಮುಖ ನಾಯಕರಾಗಿದ್ದು, ಬಿಜೆಪಿಯ ವಿಜಯದ ಹಿಂದೆ ಅವರು ಇದ್ದಾರೆ ಎಂದು ರಾವತ್ ಹೇಳಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಧಾನ ಮಂತ್ರಿಯನ್ನು ಭೇಟಿಯಾದ ಬೆನ್ನಲ್ಲೆ ರಾವತ್ ರವರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ಮತ್ತು ಶಿವಸೇನೆ ನಡುವೆ ಮೈತ್ರಿ ಇರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹುಲಿಯೊಂದಿಗೆ (ಶಿವಸೇನೆಯ ಸಂಕೇತ) ಯಾರೂ ಸ್ನೇಹ ಮಾಡಲು ಸಾಧ್ಯವಿಲ್ಲ.ಯಾರೊಂದಿಗೆ ಸ್ನೇಹ ಬೆಳೆಸಬೇಕೆಂದು ಹುಲಿ ನಿರ್ಧರಿಸುತ್ತದೆ ಎಂದರು.

ಮಹಾರಾಷ್ಟ್ರದಲ್ಲಿ ರಾಜಕೀಯ ಬದಲಾವಣೆಗಳಾಗಬಹುದೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.ಮಾಧ್ಯಮ ವರದಿಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.

Share this on:
error: Content is protected !!