Latest Posts

ಸಾಮಾಜಿಕ ಕಾರ್ಯಕರ್ತೆ ಆಯಿಷಾ ಸುಲ್ತಾನ ವಿರುದ್ಧ ದೇಶದ್ರೋಹ ಆರೋಪ

ಲಕ್ಷ ದ್ವೀಪ (ಜೂ.11): ಕವರತ್ತಿ ಪೊಲೀಸರು ಲಕ್ಷದ್ವೀಪ ಮೂಲದ ಚಲನಚಿತ್ರ ಕಾರ್ಯಕರ್ತೆ ಆಯಿಷಾ ಸುಲ್ತಾನಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಚಾನೆಲ್ ಚರ್ಚೆಯ ಸಂದರ್ಭದಲ್ಲಿ ‘ಬಯೋವೆಪನ್’ ಹೇಳಿಕೆ ನೀಡಿದ್ದಕ್ಕಾಗಿ ಲಕ್ಷದ್ವೀಪ ನಿರ್ವಾಹಕರ ವಿರುದ್ಧವೂ ಪ್ರಕರಣವಿದೆ. ಬಿಜೆಪಿ ಅಧ್ಯಕ್ಷ ಸಿ ಅಬ್ದುಲ್ ಖಾದರ್ ಅವರು ದ್ವೀಪದಲ್ಲಿ ನೀಡಿದ ದೂರಿನ ಮೇರೆಗೆ ಕವರಟ್ಟಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ದಂಡ ಸಂಹಿತೆಯ ಸೆಕ್ಷನ್ 124 ಎ ಮತ್ತು 153 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಚಾನೆಲ್ ಚರ್ಚೆಯಲ್ಲಿ, ದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಕೆ ಪಟೇಲ್ ಅವರನ್ನು ಜೈವಿಕ ಅಸ್ತ್ರ ಎಂದು ಬಣ್ಣಿಸಿದ್ದರು.

ಫೇಸ್‌ಬುಕ್ ಪೋಸ್ಟ್‌ನಲ್ಲಿ ಆಯಿಷಾ ಸುಲ್ತಾನಾ ಈ ಪದವನ್ನು ಪ್ರಫುಲ್ ಪಟೇಲರನ್ನು ಮಾತ್ರ ಉದ್ದೇಶಿಸಿ ಬಳಸಿದ್ದಾರೆ ಎಂದು ಪ್ರಫುಲ್ ಪಟೇಲ್ ಮತ್ತು ಅವರ ನೀತಿಗಳು ಸಂಪೂರ್ಣವಾಗಿ ಜೈವಿಕ ಅಸ್ತ್ರವೆಂದು ಅವರು ಭಾವಿಸಿದ್ದಾರೆ ಎಂದು ಹೇಳಿದ್ದರು. ಲಕ್ಷದ್ವೀಪ ನಿವಾಸಿಗಳು ಆಯಿಷಾ ಪರವಾಗಿ ಧ್ವನಿಯೆತ್ತಿದ್ದಾರೆ.

Share this on:
error: Content is protected !!