Latest Posts

ಪತಂಜಲಿಯ ಸಾಸಿವೆ ಎಣ್ಣೆಗೆ ಗುಣಮಟ್ಟವಿಲ್ಲ : ರಾಜಸ್ಥಾನ ಸರ್ಕಾರ

ಜೈಪುರ: ಬಾಬಾ ರಾಮ್‌ದೇವ್ ಅವರ ಕಂಪನಿ ಪತಂಜಲಿಯ ಸಾಸಿವೆ ಎಣ್ಣೆ ಕಡಿಮೆ ಗುಣಮಟ್ಟ ಎಂದು ರಾಜಸ್ಥಾನ ಸರ್ಕಾರ ಹೇಳಿದೆ.


ಸಿಂಗಾನಿಯಾ ಆಯಿಲ್ ಮಿಲ್‌ನಿಂದ ಪತಂಜಲಿಗೆ ಸರಬರಾಜು ಮಾಡಿದ ಸಾಸಿವೆ ಎಣ್ಣೆಯ ಐದು ಮಾದರಿಗಳನ್ನು ಸರ್ಕಾರ ಪರಿಶೀಲಿಸಿದೆ. ಎಲ್ಲಾ ಐದು ಮಾದರಿಗಳು ಪರೀಕ್ಷೆಯಲ್ಲಿ ವಿಫಲವಾಗಿವೆ ಮತ್ತು ತೈಲವು ಅಗತ್ಯವಾದ ಗುಣಮಟ್ಟವನ್ನು ಹೊಂದಿಲ್ಲ ಎಂದು ರಾಜಸ್ಥಾನ ಸರ್ಕಾರ ಹೇಳಿದೆ .

ಸಾಸಿವೆ ಎಣ್ಣೆಯನ್ನು ಮೇ 28 ರಂದು ಅಧಿಕಾರಿಗಳ ಸಮ್ಮುಖದಲ್ಲಿ ಪರೀಕ್ಷಿಸಲಾಯಿತು ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಓಂಪ್ರಕಾಶ್ ಮೀನಾ ಹೇಳಿದರು. ಪತಂಜಲಿಯ ಸಾಸಿವೆ ಎಣ್ಣೆ ಪ್ಯಾಕ್ ಮತ್ತು ಬಾಟಲ್ ಗುಣಮಟ್ಟವಿಲ್ಲದ ಆಹಾರವಾಗಿದೆ.

ಶ್ರೀ ಶ್ರೀ ತತ್ವಾ ಬ್ರಾಂಡ್‌ನ ಸಾಸಿವೆ ಎಣ್ಣೆಗೆ ಇದೇ ಪರಿಣಾಮ ಅನ್ವಯಿಸುತ್ತದೆ ಲ್ಯಾಬ್ ಪರೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ಓಂಪ್ರಕಾಶ್ ಮೀನಾ ಮಾಹಿತಿನೀಡಿದ್ದಾರೆ.
ಆದರೆ, ರಾಜಸ್ಥಾನ್ ಸರ್ಕಾರ ಪರಿಶೀಲನಾ ವರದಿ ಪತಂಜಲಿ ನೀಡಿಲ್ಲ .
ಎರಡು ವಾರಗಳ ಹಿಂದೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸೂಚನೆಯ ಮೇರೆಗೆ ಅಲ್ವಾರ್ ಕಲೆಕ್ಟರೇಟ್ ಅಧಿಕಾರಿಗಳು ಸಿಂಗಾನಿಯಾ ಆಯಿಲ್ ಮಿಲ್ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ದೊಡ್ಡ ಪ್ರಮಾಣದ ಪತಂಜಲಿ ಉತ್ಪನ್ನಗಳು ಕಂಡುಬಂದವು ಮತ್ತು ಮಿಲ್ ಸೀಲ್ ಮಾಡಲಾಗಿತ್ತು.

Share this on:
error: Content is protected !!