ಪೆಟ್ರೊಲ್ ಬಳಿಕ ಇದೀಗ ಡೀಸೆಲ್ ಕೂಡಾ ಸೆಂಚುರಿ ಬಾರಿಸಿದೆ;ಶತಕ ದಾಟಿದ ಪೆಟ್ರೊಲ್
ಬೆಂಗಳೂರು: ಮೇ 2ರಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಬಂದ ನಂತರದಲ್ಲಿ, ಮೇ 4ರಿಂದ ಇಲ್ಲಿವರೆಗೆ 23 ಸಲ ಇಂಧನ ದರ ಏರಿಕೆ ಮಾಡಲಾಗಿದ್ದು, ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಡೀಸೆಲ್ 100 ರೂ ದಾಟುವ ಮೂಲಕ ಇಂಧನ ದರಗಳು ಹೊಸ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ.
ಇಂಧನ ದರದಲ್ಲಿ ಮತ್ತೊಂದು ಏರಿಕೆಯ ನಂತರ ಡೀಸೆಲ್ ಬೆಲೆ ಇಂದು ರಾಜಸ್ಥಾನದಲ್ಲಿ ಲೀಟರ್ಗೆ 100 ರೂ. ದಾಟಿ ‘ದಾಖಲೆ’ ಬರೆದಿದೆ.
ಪೆಟ್ರೋಲ್ ದರ 100 ರೂ. ದಾಟಿದ 7 ರಾಜ್ಯಗಳ ಪಟ್ಟಿಗೆ ಕರ್ನಾಟಕವೂ ಸೇರ್ಪಡೆ
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ಇಂದು ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 27 ಪೈಸೆ ಮತ್ತು ಡೀಸೆಲ್ ದರವನ್ನು 23 ಪೈಸೆ ಹೆಚ್ಚಿಸಲಾಗಿದೆ.ದೆಹಲಿಯಲ್ಲಿ, ಪೆಟ್ರೋಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, ಲೀಟರ್ಗೆ 96.12 ರೂ ಇದ್ದರೆ, ಡೀಸೆಲ್ ದರ 86.98 ರೂ ಇದೆ.
ಬೀದರ್, ಬಳ್ಳಾರಿ, ಕೊಪ್ಪಳ, ದಾವಣಗೆರೆ, ಶಿರಸಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಅನೇಕ ನಗರಗಳಲ್ಲಿ ಪೆಟ್ರೋಲ್ ದರ 100 ರೂ. ದಾಟಿದೆ.ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 99.39 ಮತ್ತು ಡೀಸೆಲ್ 92.27 ರೂಗಳಿಗೆ ತಲುಪಿವೆ.
ಸದ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಸ್ಥಿರವಾಗಿ ಕಂಡುಬಂದರೂ, ದೇಶದಲ್ಲಿ ಇಂಧನ ದರ ಏರಿಕೆಯಾಗುತ್ತಿದೆ.