ಅಹಮದಾಬಾದ್: ದೇಶದ ಪ್ರಮುಖ ತಯಾರಕರಲ್ಲಿ ಒಬ್ಬರಾದ ಅದಾನಿ ಗ್ರೂಪ್ ಸಿಮೆಂಟ್ ವ್ಯವಹಾರಕ್ಕೆ ಪ್ರವೇಶಿಸುತ್ತಿದೆ. ಅದಾನಿ ಎಂಟರ್ಪ್ರೈಸಸ್ ಅಡಿಯಲ್ಲಿ ಹೊಸ ಅಂಗಸಂಸ್ಥೆಯನ್ನು ರೂಪಿಸಿದೆ ಎಂದು ಕಂಪನಿ ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ. ಅದಾನಿ ಸಿಮೆಂಟ್ ಇಂಡಸ್ಟ್ರೀಸ್ ಎಂದು ಹೆಸರಿಸಲಾಗಿರುವ ಈ ಕಂಪನಿಯು 10 ಲಕ್ಷ ರೂ.ಗಳ ಅಧಿಕೃತ ಷೇರು ಮತ್ತು 5 ಲಕ್ಷ ರೂ. ಬಂಡವಾಳ ಆಗಿದೆ.
ಹೊಸ ಕಂಪನಿಯ ಪ್ರಧಾನ ಕಚೇರಿ ಗುಜರಾತ್ನಲ್ಲಿದೆ ಎಂದು ಅದಾನಿ ಎಂಟರ್ಪ್ರೈಸಸ್ ರೆಗ್ಯುಲೇಟರಿ ಫೈಲ್ ನಲ್ಲಿ ತಿಳಿಸಿದೆ. ಪ್ರಧಾನ ಕಚೇರಿ ಅಹಮದಾಬಾದ್ ನಲ್ಲಿದ್ದು ಕಂಪನಿಯು ಜೂನ್ 11, 2021 ರಂದು ಪ್ರಾರಂಭಿಸಲಾಗಿದೆ ಎಂದು ತಿಳಿದು ಬಂದಿದೆ.