Latest Posts

ದೇಶದಲ್ಲಿ ಕ್ಷೀಣಿಸುತ್ತಿರುವ ಕೋವಿಡ್ ಪ್ರಕರಣಗಳು; ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಮರಣ ಸಂಖ್ಯೆ ಎಷ್ಟು ಗೊತ್ತೇ??

ನವದೆಹಲಿ: ಕೋವಿಡ್ ನಿಂದಾಗಿ 24 ಗಂಟೆಗಳಲ್ಲಿ ದೇಶದಲ್ಲಿ 80,834 ಜನರಿಗೆ ಸೋಂಕು ದೃಡಪಡಿಸಿದ್ದಾರೆ. 3303 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಒಟ್ಟಾರೆ ಗುಣಮುಕ್ತಿ ಪಡೆದ ರೋಗಿಗಳ ಪ್ರಮಾಣ ಶೇಕಡಾ 95.26 ರಷ್ಟಿತ್ತು. ಕಳೆದ ದಿನ ಒಟ್ಟು 1,32,062 ಜನರನ್ನು ಸೋಂಕಿನಿಂದ ಗುಣಪಡಿಸಲಾಗಿದೆ. ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಲೇ ಇದ್ದರೂ, ಮರಣ ಪ್ರಮಾಣದಲ್ಲಿ ಯಾವುದೇ ಬದಲಾವಣೆಗಳು ಸಂಭವಿಸಿಲ್ಲ.

ಕೋವಿಡ್ ದೇಶದಲ್ಲಿ ಇದುವರೆಗೆ ದೃಢಪಡಿಸಿದ ಸೋಂಕಿತರ ಸಂಖ್ಯೆ 2,94,39,989 ಆಗಿದೆ. ಒಟ್ಟು 2,80,43,446 ಜನರನ್ನು ಗುಣಪಡಿಸಲಾಗಿದೆ. ಸಾವಿನ ಸಂಖ್ಯೆ 24 ಗಂಟೆಗಳಲ್ಲಿ 3,303 ಆಗಿದ್ದು, ಇದುವರೆಗಿನ ಮರಣ ಪ್ರಮಾಣವು 3,70,384 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 10,26,159 ಸಕ್ರಿಯ ಪ್ರಕರಣಗಳಿವೆ.

Share this on:
error: Content is protected !!