ಲಕ್ಷದ್ವೀಪ: ಚಿತ್ರ ನಿರ್ಮಾಪಕ ನಟಿ ಆಯೆಷಾ ಸುಲ್ತಾನಾ ವಿರುದ್ಧ ಲಕ್ಷದ್ವೀಪದಲ್ಲಿ ಬಿಜೆಪಿ ದೂರು ದಾಖಲಿಸಿದ್ದು ಇದು ಬಿಜೆಪಿ ನಾಯಕರಲ್ಲಿಯೇ ಭಾರಿ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ.
ಪಕ್ಷದ ಲಕ್ಷದ್ವೀಪ ಅಧ್ಯಕ್ಷ ಅಬ್ದುಲ್ ಖಾದಿರ್ ಹಾಜಿ ಒಬ್ಬರೇ ದೂರು ನೀಡಿದ್ದಾರೆ ಎಂದು ಬಿಜೆಪಿ ನಾಯಕರ ಗುಂಪು ತಿಳಿಸಿದೆ. ಬಿಜೆಪಿ ಲಕ್ಷದ್ವೀಪ ಪ್ರಧಾನ ಕಾರ್ಯದರ್ಶಿ ಮತ್ತು ಸೇವ್ ಲಕ್ಷದ್ವೀಪ ವೇದಿಕೆ ಸದಸ್ಯ ಮೊಹಮ್ಮದ್ ಖಾಸಿಮ್ ಅವರು, ಪಕ್ಷವು ಅಧ್ಯಕ್ಷರನ್ನು ಸರ್ವಾನುಮತದಿಂದ ದೂರು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡಿದೆ, ಆದರೆ ಬಿಜೆಪಿ ಲಕ್ಷದ್ವೀಪ ಅಧ್ಯಕ್ಷರು ದೂರಿನಿಂದ ಹಿಂದೆ ಸರಿಯುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ಪಕ್ಷವು ಯಾವತ್ತೂ ದೂರು ನೀಡುವಂತೆ ಕೇಳಿಕೊಂಡಿಲ್ಲ, ಇಂದು ಪಕ್ಷದ ನಿರ್ಧಾರವಲ್ಲ ಎಂದು ಲಕ್ಷದ್ವೀಪ ಬಿಜೆಪಿ ಮುಖಂಡರು ತಿಳಿಸಿದ್ದಾರೆ.