Latest Posts

ಇಂದು ಲಕ್ಷದ್ವೀಪಕ್ಕೆ ಪ್ರಫುಲ್ ಪಟೇಲ್ ಭೇಟಿ: ಕಪ್ಪು ದಿನ ಆಚರಿಸಲು ಸ್ಥಳೀಯರ ನಿರ್ಧಾರ

ವಿವಾದದ ಮಧ್ಯೆ ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಇಂದು ದ್ವೀಪಕ್ಕೆ ಆಗಮಿಸಿದ್ದಾರೆ. ಮಧ್ಯಾಹ್ನ 1.30 ಕ್ಕೆ ಅಗಟ್ಟಿ ಏರ್ ಪೋರ್ಟ್ ತಲುಪಲಿದ್ದಾರೆ.

ವಿವಾದಾತ್ಮಕ ಕಾನೂನುಗಳು ಮತ್ತು ಸುಧಾರಣೆಗಳ ವಿರುದ್ಧ ದ್ವೀಪದ ಜನರು ಪ್ರತಿಭಟಿಸಲು ಪ್ರಾರಂಭಿಸಿದ ನಂತರ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಮೊದಲ ಬಾರಿಗೆ ದ್ವೀಪಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು ಮಧ್ಯಾಹ್ನ ಪ್ರಾರಂಭವಾಗುವ ದ್ವೀಪದ ಪ್ರವಾಸವು ಈ ತಿಂಗಳ 20 ರವರೆಗೆ ಇರಲಿದೆ ಆದರೆ ಪ್ರಫುಲ್ ಪಟೇಲ್ ಅವರ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಅಥವಾ ಜನರ ಪ್ರತಿನಿಧಿಗಳು ಹಾಜರಾಗಬಾರದು ಎಂದು ಸೇವ್ ಲಕ್ಷದ್ವೀಪ ವೇದಿಕೆ ಒತ್ತಾಯಿಸಿದೆ. ಮನೆಗಳಲ್ಲೂ ಕೂಡಾ ಪ್ರತಿಭಟನೆ ನಡೆಯಲಿದೆ.

ಆಡಳಿತಾಧಿಕಾರಿಗಳನ್ನು ಹಬ್ಬದ ರೀತಿಯಲ್ಲಿ ಸ್ವಾಗತಿಸುತ್ತಿದ್ದ ದ್ವೀಪದ ಜನರು ಇಂದು ಕಪ್ಪು ದಿನ ಆಚರಿಸಲು ನಿರ್ವಹಿಸಿದ್ದಾರೆ.

ಕಪ್ಪು ಧ್ವಜವನ್ನು ಮನೆ ಮನೆಗೆ ತಲುಪಿಸಲಾಗುವು . ಪ್ರತಿಭಟನಾಕಾರರು ಕಪ್ಪು ಬ್ಯಾಡ್ಜ್ ಮತ್ತು ಮುಖವಾಡಗಳನ್ನು ಧರಿಸಲಿದ್ದಾರೆ. ಪ್ರತಿಭಟನೆಯು ಸಾಮಾಜಿಕ ಮಾಧ್ಯಮಗಳ ಮೂಲಕ ಜಗತ್ತಿಗೆ ತಿಳಿಸಲು ಸೇವ್ ಲಕ್ಷದ್ವೀಪ ವೇದಿಕೆ ನಿರ್ಧರಿಸಿದೆ.

Share this on:
error: Content is protected !!