ಕವರತ್ತಿ : ಲಕ್ಷದ್ವೀಪದಲ್ಲಿ ಲಾಕ್ಡೌನ್ ಇನ್ನೊಂದು ವಾರ ವಿಸ್ತರಿಸಲಾಗಿದೆ. ಕವರತ್ತಿ, ಬಿತ್ರಾ, ಕಿಲ್ತಾನ್ ಮತ್ತು ಮಿನಿಕಾಯ್ ದ್ವೀಪಗಳಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಲಾಗುತ್ತಿದೆ.
ಮಿನಿಕಾಯ್, ಅಮಿನಿ, ಅಗಟ್ಟಿ, ಕಿಲ್ತಾನ್ ಮತ್ತು ಆಂದ್ರೋತ್ ಸೇರಿದಂತೆ ಆರು ದ್ವೀಪಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.
ಏತನ್ಮಧ್ಯೆ, ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಇಂದು ಲಕ್ಷದ್ವೀಪಕ್ಕೆ ಆಗಮಿಸಿದರು. ಪ್ರತಿಭಟನೆಯ ಭಾಗವಾಗಿ ಇಂದು ಕಪ್ಪು ದಿನವನ್ನು ಆಚರಿಸಬೇಕೆಂದು ಸೇವ್ ಲಕ್ಷದ್ವೀಪ ವೇದಿಕೆ ಆಹ್ವಾನಿಸಲಾಗಿತ್ತು