ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯ ನಂತರ ಬೆಳಕಿಗೆ
ಕುಂಭಮೇಳದ ಅಂಗವಾಗಿ ನಡೆಸಿದ ಒಂದು ಲಕ್ಷ ಕೋವಿಡ್ ಪರೀಕ್ಷಾ ಫಲಿತಾಂಶಗಳು ನಕಲಿ ಎಂದು ವರದಿಯಾಗಿದೆ. ಉತ್ತರಾಖಂಡ ಆರೋಗ್ಯ ಇಲಾಖೆಯ ಪ್ರಾಥಮಿಕ ವಿಚಾರಣೆಯ ನಂತರ ಈ ಮಾಹಿತಿ ಬಂದಿದೆ. ಕನಿಷ್ಠ ಒಂದು ಲಕ್ಷ ಕೋವಿಡ್ ಪರೀಕ್ಷಾ ವರದಿಗಳನ್ನು ಖಾಸಗಿ ಸಂಸ್ಥೆ ರೂಪಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ 1,600 ಪುಟಗಳ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.
50 ಕ್ಕೂ ಹೆಚ್ಚು ಜನರನ್ನು ನೋಂದಾಯಿಸಲು ಒಂದೇ ಫೋನ್ ಸಂಖ್ಯೆಯನ್ನು ಬಳಸಲಾಗಿದೆ. ಒಂದು ಆಂಟಿಜೆನ್ ಟೆಸ್ಟ್ ಕಿಟ್ನೊಂದಿಗೆ 700 ಮಾದರಿಗಳನ್ನು ಪರೀಕ್ಷಿಸಲಾಗಿತ್ತು . ಆಂಟಿಜೆನ್ ಪರೀಕ್ಷಾ ಕಿಟ್ ಒಂದೇ ಬಳಕೆಗೆ ಮಾತ್ರವಿರುದಾಗಿದೆ, ಅನೇಕ ವಿಳಾಸಗಳು ಮತ್ತು ಹೆಸರುಗಳು ಕಾಲ್ಪನಿಕವಾಗಿದ್ದವು. ಹರಿದ್ವಾರದ ಮನೆ ಸಂಖ್ಯೆ 5ರಿಂದ ಸುಮಾರು 530 ಮಾದರಿಗಳನ್ನು ಕೋವಿಡ್ ಪರೀಕ್ಷೆಗೆ ತೆಗೆದುಕೊಂಡಿದ್ದಾರೆ. ಒಂದೇ ಮನೆಯಲ್ಲಿ ಇಷ್ಟು ನಿವಾಸಿಗಳು! ವಿಚಿತ್ರ ವಿಳಾಸಗಳನ್ನು ಮನೆ ನಂ 56 ಅಲಿಘಡ್ ಮನೆ ನಂ 76 ಮುಂಬೈ ಎಂದು ನೀಡಲಾಗಿದೆ ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನೇಕ ಫೋನ್ ಸಂಖ್ಯೆಗಳು ನಕಲಿ. ಕಾನ್ಪುರ್, ಮುಂಬೈ ಮತ್ತು ಅಹಮದಾಬಾದ್ನಂತಹ 18 ಸ್ಥಳಗಳ ಜನರು ಒಂದೇ ಫೋನ್ ಸಂಖ್ಯೆಯನ್ನು ನೀಡಿದರು. ಎರಡು ಖಾಸಗಿ ಲ್ಯಾಬ್ಗಳಿಗೆ ಸಂಸ್ಥೆ ಮಾದರಿಗಳನ್ನು ನೀಡಿದ್ದು, ಈ ಎರಡು ಲ್ಯಾಬ್ಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕುಂಭ ಮೇಳ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಅರ್ಜುನ್ ಸಿಂಗ್ ಸೆಂಗಾರ್ ಹೇಳಿದರು.
ತನಿಖಾ ವರದಿಯನ್ನು ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಹಸ್ತಾಂತರಿಸಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ಅಮಿತ್ ನೇಗಿ ತಿಳಿಸಿದ್ದಾರೆ. ಹಲವಾರು ಅಕ್ರಮಗಳು ಕಂಡುಬಂದಿವೆ. 15 ದಿನಗಳಲ್ಲಿ ಡಿಎಂನಿಂದ ವಿವರವಾದ ವರದಿಯನ್ನು ಪಡೆದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ನೇಗಿ ಹೇಳಿದರು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿ ರವಿಶಂಕರ್ ತಿಳಿಸಿದ್ದಾರೆ.