Latest Posts

ಕಾಮಗಾರಿ ಪ್ರಾರಂಭವಾದ ಬಿಜೆಪಿ ಕಚೇರಿಯ ಅಡಿಪಾಯವನ್ನು ಕಿತ್ತೊಗೆದ ರೈತರು

ಹರಿಯಾಣದ ಬಿಜೆಪಿ ಕಚೇರಿಗೆಂದು ಹಾಕಲಾದ ಅಡಿಪಾಯವನ್ನು ಹಾಕಿದ ಕೆಲವೇ ಗಂಟೆಗಳಲ್ಲಿ ರೈತರು ನಾಶಪಡಿಸಿದ್ದಾರೆ.
ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿಯಾಗಿತ್ತು ರೈತರು ಅಡಿಪಾಯವನ್ನು ನಾಶಪಡಿಸಿದ್ದು.

ಪಕ್ಷದ ರಾಜ್ಯ ಅಧ್ಯಕ್ಷ ಒ.ಪಿ.ಧಂಕರನ್ ಅವರು ಕಳೆದ ಸೋಮವಾರ ಪಕ್ಷದ ಕಚೇರಿಗೆ ಶಿಲಾನ್ಯಾಸ ಮಾಡಿದರು. ಮಹಿಳೆಯರು ಸೇರಿದಂತೆ ಅನೇಕ ಜನರು ಕಪ್ಪು ಧ್ವಜಗಳೊಂದಿಗೆ ಘಟನಾ ಸ್ಥಳದಲ್ಲಿ ಜಮಾಯಿಸಿ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ತಿಳಿಸಲಾಗಿತ್ತು. ಆದರೆ ಬಿಜೆಪಿ ಕಾರ್ಯಕರ್ತರು ರೈತರ ಪ್ರತಿಭಟನೆಗೆ ಹೆದರಿ ನಿಗದಿತ ಸಮಯಕ್ಕಿಂತ ಮುಂಚೆ ಅಡಿಪಾಯ ಹಾಕಿದ್ದರು. “ನಮ್ಮ ಪ್ರತಿಭಟನೆಯ ಸಂಕೇತವಾಗಿ ನಾವು ಅದನ್ನು ತೆಗೆದುಹಾಕಿದ್ದೇವೆ “ಎಂದು ಪ್ರತಿಭಟನಾಕಾರರೊಬ್ಬರು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮುಖಂಡರು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಅನೇಕ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

Share this on:
error: Content is protected !!