ಕವರತ್ತಿ: ಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನ ವಿರುದ್ದ ಪ್ರಕರಣ ದಾಖಲಿಸಿದ ಬಜೆಪಿ ಯನ್ನು ಸೇವ್ ಲಕ್ಷದೀಪ್ ಹೋರಾಟ ಸಮಿತಿಯಿಂದ ಹೊರ ಹಾಕಿದೆ.
ಬಿಜೆಪಿ ಲಕ್ಷದ್ವೀಪ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ನೀಡಿದ ದೂರಿನ ಆಧಾರದ ಮೇಲೆ ಆಯಿಷಾ ಸುಲ್ತಾನಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ವಿರುಧ್ದ ‘ಜೈವಿಕ ಶಸ್ತ್ರ’ ಎಂಬ ಪದವನ್ನು ಬಳಸಿದ ಕಾರಣಕ್ಕಾಗಿ ಕವರಟ್ಟಿ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ.
ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಸಲ್ ಮತ್ತು ಸೇವ್ ಲಕ್ಷದ್ವೀಪ ವೇದಿಕೆ ಮುಖಂಡರು ಆಯೆಷಾಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಮತ್ತು ಬಿಜೆಪಿ ಬಣ ತಮ್ಮ ನಿಲುವನ್ನು ಬದಲಾಯಿಸಲು ಸಿದ್ಧರಿರಲಿಲ್ಲ.ಈ ಹಿನ್ನೆಲೆಯಲ್ಲಿಯೇ ಬಿಜೆಪಿಯನ್ನು ಸೇವ್ ಲಕ್ಷದ್ವೀಪ್ ವೇದಿಕೆಯಿಂದ ಹೊರಹಾಕಲಾಗಿದೆ.
ಆಡಳಿತ ಸುಧಾರಣೆಗಳ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಬಿಜೆಪಿ ನಾಯಕರು ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರನ್ನು ಭೇಟಿ ಮಾಡಲಿದ್ದಾರೆ.ದೇಶದ್ರೋಹ ಪ್ರಕರಣದಲ್ಲಿ ಆಯೆಷಾ ಸುಲ್ತಾನಾ ಸಲ್ಲಿಸಿದ್ದ ನಿರೀಕ್ಷಿತ ಜಾಮೀನು ಅರ್ಜಿಯನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಈ ತಿಂಗಳ 20 ರಂದು ಹಾಜರಾಗುವಂತೆ ಪೊಲೀಸರು ಕೇಳಿಕೊಂಡಿದ್ದಾರೆ ಎಂದು ಆಯಿಷಾ ಹೈಕೋರ್ಟ್ಗೆ ತಿಳಿಸಿದರು.