Latest Posts

ತ್ರಿಪುರದಲ್ಲಿ ಗೋ ಸಾಗಾಣೆ ಅರೋಪ: ಮೂವರು ಮುಸ್ಲಿಂ ಯುವಕರನ್ನು ಥಳಿಸಿ ಕೊಲೆ

ತ್ರಿಪುರದಲ್ಲಿ ಮೂವರು ಮುಸ್ಲಿಂ ಯುವಕರನ್ನು ದನಗಳನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಗುಂಪೊಂದು ಹೊಡೆದು ಕೊಲ್ಲಲಾಯಿತು.

ತ್ರಿಪುರದ ಖೋವಾಯ್ ಜಿಲ್ಲೆಯಲ್ಲಿ ಇಂದು ಮುಂಜಾನೆ 4.30 ರ ಸುಮಾರಿಗೆ ಈ ಘಟನೆ ನಡೆದಿದೆ. ಸಯೀದ್ ಹುಸೇನ್, ಬಿಲಾಲ್ ಮಿಯಾ ಮತ್ತು ಸೈಫುಲ್ ಇಸ್ಲಾಂ ಕೊಲ್ಲಲ್ಪಟ್ಟರು. ಈ ಮೂವರು ಸೆಪಾಹಿಜಲಾ ಜಿಲ್ಲೆಯ ಸೋನಮುರದವರು ಎಂದು ಖೋವಾಯಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಕುಮಾರ್ ತಿಳಿಸಿದ್ದಾರೆ.

ತ್ರಿಪುರದ ನಮಂಜೋಯ್ಪರಾ ಗ್ರಾಮದಲ್ಲಿ ಸುಮಾರು ಐದು ದನಗಳನ್ನು ಸಾಗಿಸುತ್ತಿದ್ದ ಮಿನಿಟ್ರಕ್ ಅನ್ನು ಜನರ ಗುಂಪೊಂದು ಬೆನ್ನಟ್ಟಿ ವಾಹನದಲ್ಲಿದ್ದ ಸಯೀದ್ ಮತ್ತು ಬಿಲಾಲ್ ಮೇಲೆ ಮಾರಣಾಂತಿಕ ಆಯುಧಗಳಿಂದ ಹಲ್ಲೆ ನಡೆಸಿದರು.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ನಂತರ ಅಗರ್ತಲಾದ ಗೋವಿಂದ್ ಭಲ್ಲಾಭ್ ಪಂತ್ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.

Share this on:
error: Content is protected !!