Latest Posts

ಲಕ್ಷದ್ವೀಪ; ಕೇರಳ ಹೈಕೋರ್ಟ್ ವ್ಯಾಪ್ತಿಯಿಂದ ಕರ್ನಾಟಕ ಹೈಕೋರ್ಟ್ ವ್ಯಾಪ್ತಿಗೆ ಸ್ಥಳಾಂತರ: ಕೇಂದ್ರಕ್ಕೆ ಶಿಫಾರಸು

ನವದೆಹಲಿ: ಲಕ್ಷದ್ವೀಪವನ್ನು ಕೇರಳ ಹೈಕೋರ್ಟ್ ವ್ಯಾಪ್ತಿಯಿಂದ ಕರ್ನಾಟಕ ಹೈಕೋರ್ಟ್ ವ್ಯಾಪ್ತಿಗೆ ಸ್ಥಳಾಂತರಿಸಲು ಲಕ್ಷದ್ವೀಪ ಆಡಳಿತ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ಕ್ರಮಗಳ ವಿರುದ್ಧ ಕೇರಳದಲ್ಲಿ ತೀವ್ರ ಪ್ರತಿಭಟನೆ ಮತ್ತು ಕೇರಳ ಹೈಕೋರ್ಟ್‌ನಲ್ಲಿ ಹಲವಾರು ಅರ್ಜಿಗಳ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಕ್ಕೆ ಶಿಫಾರಸು ಮಾಡಲಾಗಿದೆ. ಲಕ್ಷದ್ವೀಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇರಳ ಹೈಕೋರ್ಟ್ ನಲ್ಲಿ 11 ರಿಟ್ ಸೇರಿದಂತೆ 23 ಅರ್ಜಿಗಳನ್ನು ಸಲ್ಲಿಸಲಾಗಿದೆ.

ಆದರೆ ಲಕ್ಷದ್ವೀಪವನ್ನು ಕೇರಳ ಹೈಕೋರ್ಟ್ ವ್ಯಾಪ್ತಿಯಿಂದ ಕರ್ನಾಟಕ ಹೈಕೋರ್ಟ್ ವ್ಯಾಪ್ತಿಗೆ ಸ್ಥಳಾಂತರಿಸಲು ಶಿಫಾರಸು ಇಲ್ಲವೆಂದು ಇದರ ಕುರಿತಾದ ಹೇಳಿಕೆಗಳು ಸುಳ್ಳೆಂದು ಲಕ್ಷದ್ವೀಪ ಜಿಲ್ಲಾಧಿಕಾರಿ ಎಸ್.ಕೆ ಅಸ್ಗರ್ ಅಲಿ ತಿಳಿಸಿದ್ದಾರೆ.

Share this on:
error: Content is protected !!