ಕವರತ್ತಿ : ಚಾನೆಲ್ ಚರ್ಚೆಯಲ್ಲಿ ನೀಡಿದ ಹೇಳಿಕೆಯಿಂದಾಗಿ ದೇಶದ್ರೋಹದ ಆರೋಪ ಹೊರಿಸಲಾದ ಆಯಿಷಾ ಸುಲ್ತಾನಾ ಅವರನ್ನು ತನಿಖಾ ತಂಡ ವಿಚಾರಣೆ ನಡೆಸಿ ನಂತರ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.ಮೂರೂವರೆ ಗಂಟೆಗಳ ವಿಚಾರಣೆಯ ನಂತರ ಆಯಿಷಾಳನ್ನು ಬಿಡುಗಡೆ ಮಾಡಲಾಗಿದೆ.ಮೂರು ದಿನಗಳ ಕಾಲ ಲಕ್ಷದ್ವೀಪದಲ್ಲಿಯೇ ಇರುತ್ತಾರೆ ಮತ್ತು ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಕರೆಸಲಾಗುವುದು ಎಂದು ಕವರಟ್ಟಿ ಪೊಲೀಸರು ತಿಳಿಸಿದ್ದಾರೆ.
ಸೇವ್ ಲಕ್ಷದ್ವೀಪ ಆಂದೋಲನದ ಅಂಗವಾಗಿ ದೂರದರ್ಶನ ಟಾಕ್ ಶೋವೊಂದರಲ್ಲಿ ನಡೆಸಿದ ಚರ್ಚೆಯಲ್ಲಿನ ದೇಶದ್ರೋಹ ಆರೋಪದ ಮೇಲೆ ಲಕ್ಷದ್ವೀಪ ಬಿಜೆಪಿ ಅಧ್ಯಕ್ಷ ಸಿ ಅಬ್ದುಲ್ ಖಾದರ್ ಹಾಜಿ ಲಕ್ಷದ್ವೀಪ ಪೊಲೀಸರಿಗೆ ದೂರು ನೀಡಿದ್ದರು.
ವಿಚಾರಣೆ ಬಳಿಕ ಆಯಿಷಾ ಸುಲ್ತಾನ ಬಿಡುಗಡೆ:ಮೂರು ದಿನಗಳವರೆಗೆ ಲಕ್ಷದ್ವೀಪ ಬಿಡದಂತೆ ಆದೇಶ
