ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ಭೂಮಿಯಲ್ಲಿ ನಿರ್ಮಿಸುವ ‘ಶೀರಾಂ ದೇವಸ್ಥಾನ” ದ ವಿರುದ್ಧ ಮತ್ತೊಂದು ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ.
47 ಲಕ್ಷ ರೂಪಾಯಿ ಮೌಲ್ಯದ ಎರಡು ಪ್ಲಾಟ್ಗಳನ್ನು ರಾಮಕ್ಷೇತ್ರ ಟ್ರಸ್ಟ್ಗೆ 3.5 ಕೋಟಿ ರೂ.ಗೆ ಮಾರಾಟ ಮಾಡಿರುವ ಬಗ್ಗೆ ಆರೋಪ ಬಂದಿದೆ . ಒಂದು ಫ್ಲೋಟ್ 20 ಲಕ್ಷ ಕ್ಕೂ ಮತ್ತು ಮತ್ತೊಂದು ಫ್ಲೋಟ್ 27 ಲಕ್ಷ ರೂ ಬೆಲೆ ಇರುವ ಎರಡು ಫ್ಲೋಟ್ ಗಳನ್ನು ರಾಮಕ್ಷೇತ್ರ ಟ್ರಸ್ಟ್ಗೆ ಕ್ರಮವಾಗಿ 2.5 ಕೋಟಿ ಮತ್ತು 1 ಕೋಟಿ ರೂ.ಗಳಿಗೆ ಮಾರಾಟವಾಯಿತು. ಈ ಒಪ್ಪಂದಕ್ಕೆ ಬಿಜೆಪಿ ಮುಖಂಡ ಮತ್ತು ಅಯೋಧ್ಯೆ ಮೇಯರ್ ರಿಷಿಕೇಶ್ ಉಪಾಧ್ಯಾಯ ಅವರ ಅಳಿಯ ದೀಪ್ ನಾರಾಯಣ್ ಸಹಿ ಹಾಕಿದ್ದಾರೆ.ಈ ಭ್ರಷ್ಟಾಚಾರವನ್ನು ದಾಖಲೆಗಳೊಂದಿಗೆ ಇಂಡಿಯಾ ಟುಡೇ ಬಿಡುಗಡೆ ಮಾಡಿದೆ.
890 ಚದರ ಮೀಟರ್ ಭೂಮಿಯನ್ನು ದೇವೇಂದ್ರ ಪ್ರಸಾದ್ ಅವರಿಂದ ಫೆಬ್ರುವರಿ 20 ರಂದು ದೀಪ್ ನಾರಾಯಣರು 20 ಲಕ್ಷ ರೂ.ಗೆ ಖರೀದಿಸಿದ್ದರು. ಈ ಪ್ರದೇಶದಲ್ಲಿ ಕಡಿಮೆ ದರ 20 ಲಕ್ಷ. ಭೂಮಿಯ ಅಂದಾಜು ಮೌಲ್ಯ 35.6 ಲಕ್ಷ ರೂ ಆಗಿದೆ.
ಆದರೆ ಮೂರು ತಿಂಗಳ ಹಿಂದೆ ಈ ಭೂಮಿಯನ್ನು ದೀಪ್ ನಾರಾಯಣನು ರಾಮಕ್ಷೇತ್ರ ಟ್ರಸ್ಟ್ಗೆ 2.5 ಕೋಟಿ ರೂ.ಗೆ ಮಾರಾಟ ಮಾಡಿದರು.ಒಂದೇ ದಿನದಲ್ಲಿ ಭೂಮಿಯ ಬೆಲೆ 20 ಲಕ್ಷ ರೂ.ಗಳಿಂದ 2.5 ಕೋಟಿ ರೂ.ಗೆ ಏರಿಕೆಯಾಗಿದೆ. ಫೆಬ್ರವರಿ 20 ರಂದು ದೀಪ್ ನಾರಾಯಣನು ಎರಡನೇ ಭೂಮಿಯನ್ನು ಟ್ರಸ್ಟ್ಗೆ 1 ಕೋಟಿ ರೂ.ಗೆ ಮಾರಾಟ ಮಾಡಿದರು. ಪ್ರದೇಶದ ಭೂಮಿಯ ಮೌಲ್ಯಮಾಪನ ಮೌಲ್ಯದ ಪ್ರಕಾರ, ಈ ಜಮೀನಿನ ಮೌಲ್ಯ ಕೇವಲ 27.08 ಲಕ್ಷ ರೂ ಆಗಿದೆ. ಈ ಎರಡು ವಹಿವಾಟುಗಳಿಗೆ ಸಾಕ್ಷಿಯಾದಾರರು ಟ್ರಸ್ಟ್ನ ಸದಸ್ಯ ಅನಿಲ್ ಮಿಶ್ರಾ ಆಗಿದ್ದಾನೆ.
ಶ್ರೀ ರಾಮಜನ್ಮ ಭೂಮಿಯ ವಿಜಯೇಶ್ವರ ಪ್ರದೇಶದ 12080 ಚದುರ ಮೀಟರ್ ಜಾಗ ಖರೀದಿಯಲ್ಲಿಯೂ ಈ ಹಿಂದೆ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು.