Latest Posts

‘ಸರ್ಕಾರ ನಮ್ಮ ಮಾತನ್ನು ಕೇಳುತ್ತಿಲ್ಲ, ಟ್ರ್ಯಾಕ್ಟರ್‌ನೊಂದಿಗೆ ಸಿದ್ಧರಾಗಿರಿ’: ರಾಕೇಶ್ ಟಿಕಾಯತ್

ನವದೆಹಲಿ: ಏಳು ತಿಂಗಳ ನಂತರ ಮತ್ತೆ ರೈತರು ಬೃಹತ್ ಪ್ರತಿಭಟನೆಗೆ ಸಿದ್ದರಾಗುತ್ತಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಅವರು ರೈತರ ಹೋರಾಟಗಾರರಿಗೆ ಟ್ರಾಕ್ಟರುಗಳೊಂದಿಗೆ ಸಿದ್ಧರಾಗಿರಬೇಕು ಎಂದು ಕರೆ ನೀಡಿದ್ದಾರೆ.

ದೆಹಲಿ ಗಡಿಯಲ್ಲಿ ಕೇಂದ್ರದ ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ರಾಕೇಶ್ ಟಿಕಾಯತ್ ಅವರು “ನಮ್ಮ ಸಮಸ್ಯೆಯನ್ನು ಸರ್ಕಾರ ಕೇಳುವುದಿಲ್ಲ, ಟ್ರ್ಯಾಕ್ಟರ್‌ನೊಂದಿಗೆ ಸಿದ್ಧರಾಗಿರಿ” ಎಂದು ಹೇಳಿದರು. ಭೂಮಿಯನ್ನು ಉಳಿಸುವ ಹೋರಾಟವನ್ನು ತೀವ್ರಗೊಳಿಸಬೇಕೆಂದು ಟಿಕಾಯತ್ ಟ್ವಿಟ್ಟರ್ ನಲ್ಲಿ ಕರೆ ನೀಡಿದ್ದಾರೆ.

ರೈತರು ಪ್ರತಿಭಟನೆ ನಡೆಸುತ್ತಿರುವ ರಾಜ್ಯದ ಗಡಿಯಲ್ಲಿ ಜೂನ್ 30 ರಂದು ‘ಹುಲ್ ಕ್ರಾಂತಿ ದಿವಾಸ್’ ಆಚರಿಸಲು ಸಂಯುಕ್ತಾ ಕಿಸಾನ್ ಮೋರ್ಚಾ ನಿರ್ಧರಿಸಿದೆ.

ಈ ಆಂದೋಲನಕ್ಕೆ ಸ್ಥಳೀಯ ಗ್ರಾಮಸ್ಥರ ಬೆಂಬಲವಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಜೂನ್ 30 ರಂದು ಬುಡಕಟ್ಟು ಜನಾಂಗದವರನ್ನು ಪ್ರತಿಭಟನಾ ಸ್ಥಳಕ್ಕೆ ಆಹ್ವಾನಿಸಲಾಗಿದೆ.

ಹರಿಯಾಣದಲ್ಲಿ ಬಿಜೆಪಿ ಮತ್ತು ಜೆಜೆಪಿ (ಜನನಾಯಕ್ ಜನತಾ ಪಕ್ಷ) ನಾಯಕರ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಸಹಯುಕ್ತಾ ಕಿಸಾನ್ ಮೋರ್ಚಾ ನಿರ್ಧರಿಸಿದೆ.

Share this on:
error: Content is protected !!