ಪರಿಶುದ್ದ ಕುರ್’ಆನ್ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಚೀಮಾರಿ ಹಾಕಿಸಿಕೊಂಡಿದ್ದ ವಸೀಮ್ ರಝ್ವಿ ಇದೀಗ ಕುರ್’ಆನಿನ 24 ಆಯತುಗಳನ್ನು ಕಿತ್ತಾಗಿದ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಹೇಳಿಕೆ ನೀಡಿದರ ಬಗ್ಗೆ ಆತನ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಮಹಾರಾಷ್ಟ್ರ, ನಾಂದೇಡ್ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪೋಲಿಸು ವರಿಷ್ಟಾಧಿಕಾರಿಗಳ ಮೂಲಕ ಮಹಾರಾಷ್ಟ್ರ ಸರಕಾರವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮಹಾರಾಷ್ಟ್ರ ರಾಜ್ಯ ಸಮಿತಿ ಮತ್ತು ಜಂಯಿಯ್ಯತುಲ್ ಉಲಮಾ ಹಿಂದ್, ಮಹಾರಾಷ್ಟ್ರ ವತಿಯಿಂದ ಒತ್ತಾಯಿಸಲಾಗಿದೆ.

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮಹಾರಾಷ್ಟ್ರ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಅಲ್ತಾಫ್ ಅಹ್ಮದ್ ಮತ್ತು ಜಂಯಿಯ್ಯತುಲ್ ಉಲಮಾ ಹಿಂದ್, ನಾಂದೇಡ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌಲಾನ ಅಯ್ಯೂಬ್ ದಾಮದ್ ಬರಕಾತುಹು ನೇತೃತ್ವದಲ್ಲಿ ಭೇಟಿಯಾದ ನಿಯೋಗ ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದೆ.