Latest Posts

ಕೇಂದ್ರದ ಐಟಿ ಕಾಯ್ದೆಯ ನಿಬಂಧನೆಗಳನ್ನು ಪಾಲಿಸದಿದ್ದಲ್ಲಿ
ವಾಟ್ಸಾಪ್ ನಿಷೇಧಿಸಬೇಕೆಂದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ!!!

ಕೊಚ್ಚಿ: ವಾಟ್ಸಾಪ್ ನಿಷೇಧವನ್ನು ಕೋರಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯು ಕೇಂದ್ರ ಐಟಿ ನಿಯಮಗಳನ್ನು ಪಾಲಿಸದಿದ್ದರೆ ವಾಟ್ಸಾಪ್ ಅನ್ನು ನಿಷೇಧಿಸಬೇಕು ಎಂದಾಗಿದೆ ಅರ್ಜಿದಾರನ ಅವಶ್ಯಕತೆ. ಕುಮಿಲಿ ಮೂಲದ ಓಮನಕುಟ್ಟನ್ ಈ ಕುರಿತಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ .

ಕೇಂದ್ರ ಐಟಿ ಕಾಯ್ದೆಯ ನಿಬಂಧನೆಗಳನ್ನು ಪಾಲಿಸುವಂತೆ ವಾಟ್ಸಾಪ್‌ಗೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ವಾಟ್ಸಾಪ್, ಬಳಕೆದಾರರ ಗೌಪ್ಯತೆಗೆ ನುಸುಳುತ್ತದೆ. ವಾಟ್ಸಾಪ್ ಡೇಟಾವನ್ನು ಹಾಳುಮಾಡುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಈ ಸಂದರ್ಭದಲ್ಲಿ, ವಾಟ್ಸಾಪ್ ಡೇಟಾವನ್ನು ಪ್ರಕರಣಗಳಲ್ಲಿ ಸಾಕ್ಷಿಯಾಗಿ ಸ್ವೀಕರಿಸಬಾರದು ಎಂದು ಅರ್ಜಿದಾರರು ಕೇಳಿದ್ದಾರೆ.

Share this on:
error: Content is protected !!