ಚೇಳಾರಿ: ಭಾರತದ ಅತೀ ದೊಡ್ಡ ಮದರಸಾ ಬೋರ್ಡ್ ಆದ “ಸಮಸ್ತ” ಸಿಲಬೆಸ್ ನಲ್ಲಿ ಭಾರತದಾತ್ಯಂತ ಏಪ್ರಿಲ್ 2, 3 ರಂದು ನಡೆದ ಮತ್ತು 3, 4 ರಂದು ವಿದೇಶದಲ್ಲಿ ನಡೆದ ಸಮಸ್ತ ಮದರಸಾ ಪರೀಕ್ಷೆಗಳ ಫಲಿತಾಂಶಗಳು ಮತ್ತು ಕೋವಿಡ್ನಿಂದಾಗಿ ಪರೀಕ್ಷೆಗೆ ಹಾಜರಾಗಲು ವಿಫಲರಾದವರಿಗೂ,ಕೇವಲ ಒಂದು ವಿಷಯದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಮರುಮಾಪನಕ್ಕೆ ಅರ್ಜಿ ಸಲ್ಲಿಸಿದವರಿಗೆ ಜೂನ್ 12,13 ರಂದು ಘೋಷಿಸಲಾದ ಪರೀಕ್ಷೆ ಫಲಿತಾಂಶ,ಪರಿಷ್ಕರಣೆಗೆ ಅಪೇಕ್ಷೆ ನೀಡಿದವರ ಫಲಿತಾಂಶವು ಸಮಸ್ತದ ಅಧಿಕೃತ ವೆಬ್ ಸೈಟ್ ನಲ್ಲಿ ಘೋಷಿಸಲಾಗಿದೆ.
ಐದು, ಏಳು, ಹತ್ತು ಮತ್ತು ಹನ್ನೆರಡನೇ ತರಗತಿಗಳಲ್ಲಿ ಒಟ್ಟು 18 ವಿಷಯಗಳಲ್ಲಿ ಒಟ್ಟು 10,228 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.ಈ ಪೈಕಿ 9,678 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾ 94.62 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ 6,567 ವಿಷಯಗಳ ಫಲಿತಾಂಶ ಪ್ರಕಟಿಸಲಾಗಿದೆ.
ಫಲಿತಾಂಶಗಳು
https://samastha.info/ ವೆಬ್ಸೈಟ್ನಲ್ಲಿ ಲಭ್ಯವಿರುತ್ತವೆ.
