ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾನಹಾನಿ ಪ್ರಕರಣದಲ್ಲಿ ಗುಜರಾತ್ನ ಸೂರತ್ ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ.ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಸಲ್ಲಿಸಿದ್ದ ಮಾನಹಾನಿ ಮೊಕದ್ದಮೆಯಲ್ಲಿ ರಾಹುಲ್ ಹಾಜರಾಗಿದ್ದರು.ಎಲ್ಲಾ ಕಳ್ಳರಿಗೆ ಮೋದಿ ಎಂಬ ಹೆಸರು ಹೇಗೆ ಬರುತ್ತದೆ ಎಂಬ ರಾಹುಲ್ ಹೇಳಿಕೆಗೆ ಕೇಸು ದಾಖಲಾಗಿತ್ತು.
2019 ರ ಲೋಕಸಭಾ ಚುನಾವಣೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದರು.ಸೂರತ್ ನ್ಯಾಯಾಲಯಕ್ಕೆ ಇಂದು ಎರಡನೇ ಬಾರಿ ರಾಹುಲ್ ಹಾಜರಾಗಿದ್ದು,ಮೋದಿ ಹೆಸರಿನ ಯಾರನ್ನೂ ಅವಮಾನಿಸಿಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಪ್ರಕರಣವನ್ನು ಮುಂದಿನ ತಿಂಗಳಿಗೆ ಕಾಯ್ದಿರಿಸಲಾಗಿದೆ.