Latest Posts

14 ಗಂಟೆಗಳ ವಿಚಾರಣೆ ಬಳಿಕ ತಾಯ್ನಾಡಿಗೆ ಮರಳಿದ ಚಲನಚಿತ್ರ ನಿರ್ಮಾಪಕ ನಟಿ ಆಯೆಷಾ ಸುಲ್ತಾನ

ಲಕ್ಷದ್ವೀಪ: ಚಾನೆಲ್‌ನಲ್ಲಿ ನಡೆದ ಚರ್ಚೆಯನ್ನು ಉಲ್ಲೇಖಿಸಿದ್ದಕ್ಕಾಗಿ ದೇಶದ್ರೋಹದ ಆರೋಪ ಹೊರಿಸಿರುವ ಚಲನಚಿತ್ರ ನಿರ್ಮಾಪಕ ಆಯೆಷಾ ಸುಲ್ತಾನ ಅವರನ್ನು ವಿಚಾರಣೆ ನಂತರ ಬಿಡುಗಡೆ ಮಾಡಲಾಗಿದೆ.

ಮೂರು ದಿನಗಳಲ್ಲಿ 14 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಕವರಟ್ಟಿ ಪೊಲೀಸರು ಬಿಡುಗಡೆ ಮಾಡಿದರು. ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದರೂ, ಪೊಲೀಸರು ಆಯೆಷಾ ಬಂಧನವನ್ನು ದಾಖಲಿಸಿರಲಿಲ್ಲ.

ವಿಚಾರಣೆ ಮುಗಿದಿದ್ದು, ಕೊಚ್ಚಿಗೆ ಮರಳಲಿದ್ದೇನೆ ಎಂದು ಆಯೆಷಾ ಸುಲ್ತಾನ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎರಡು ದಿನಗಳಲ್ಲಿ ಕೊಚ್ಚಿಗೆ ತಲುಪುತ್ತೇನೆ ಎಂದು ಹೇಳಿದರು.

ಲಕ್ಷದ್ವೀಪ ನಿರ್ವಾಹಕರ ವಿವಾದಾತ್ಮಕ ನೀತಿಗಳ ಕುರಿತು ಜೂನ್ 7 ರಂದು ಮೀಡಿಯಾ ಒನ್ ಚಾನೆಲ್ ಚರ್ಚೆಯಲ್ಲಿ ‘ಬಯೋ ವೆಪನ್’ ಅನ್ನು ಉಲ್ಲೇಖಿಸಿದ ಹೆಸರಿನಲ್ಲಿ, ದೇಶದ್ರೋಹದ ಆರೋಪ ಹೊರಿಸಲಾಯಿತು. ಬಿಜೆಪಿ ಲಕ್ಷದ್ವೀಪ ಘಟಕದ ಅಧ್ಯಕ್ಷ ಸಿ. ಅಬ್ದುಲ್ ಖಾದಿರ್ ಹಾಜಿ ಅವರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ತನಿಖಾ ತಂಡವು ಬಯೋ ವೆಪೆನ್ ಉಲ್ಲೇಖದ ಕಾರಣವನ್ನು ಕೇಳಿದೆ.

Share this on:
error: Content is protected !!