Latest Posts

ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕಾರ್ಯಕ್ಕೆ ರಾಹುಲ್ ಗಾಂಧಿ ಮುಂದಾಗಬೇಕು’ – ಶಿವಸೇನೆ

ಮುಂಬೈ ,ಜೂ .24: “ಕೇಂದ್ರದಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿವರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಕೈಜೋಡಿಸಿ , ಈ ಮೂಲಕ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಗಬೇಕು ” ಎಂದು ಶಿವಸೇನೆ ಆಗ್ರಹಿಸಿದೆ.

ಈ ಕುರಿತು ಶಿವಸೇನೆ ತನ್ನ ಮುಖವಾಣಿ ‘ ಸಾಮ್ನಾ’ ದಲ್ಲಿ ಬರೆದುಕೊಂಡಿದ್ದು , ರಾಹುಲ್ ಗಾಂಧಿ ಅವರು ಕೇಂದ್ರ ಮತ್ತು ಅದರ ನೀತಿಗಳನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ, ಆದರೆ ಅದು ಟ್ವಿಟರ್‌ನಲ್ಲಿ ಮಾತ್ರ ಎಂದು ಹೇಳಿದೆ.ಇನ್ನು ಪ್ರಧಾನಿ ನರೇಂದ್ರ ಮೋದಿಯವರ ದೇಹ ಭಾಷೆಯೇ ಇತ್ತೀಚೆಗೆ ಬದಲಾಗಿದ್ದು , ದೇಶದ ಪರಿಸ್ಥಿತಿ ತನ್ನ ಕೈಮೀರಿ ಹೋಗಿದೆ ಎಂಬುದರ ಅರಿವು ಅವರಿಗೆ ಆಗಿದೆ . ಆದರೆ ಜನರ ಕೋಪದ ಹೊರತಾಗಿಯೂ , ದುರ್ಬಲ ಮತ್ತು ಭಿನ್ನಾಭಿಪ್ರಾಯಗಳಿರುವ ವಿರೋಧ ಪಕ್ಷಗಳಿಂದ ತಮಗೆ ಯಾವುದೇ ಸಂಕಟ ಬರುವುದಿಲ್ಲ ಎಂಬ ವಿಶ್ವಾಸವನ್ನು ಬಿಜೆಪಿ ಮತ್ತು ಸರ್ಕಾರ ಹೊಂದಿದೆ ‘ ಎಂದು ಹೇಳಿದೆ.ರಾಹುಲ್ ಗಾಂಧಿ ಅವರು ಎಲ್ಲ ವಿರೋಧ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಬೇಕು ಎಂದು ಆಗ್ರಹಿಸಿರುವ ಸೇನಾ, ” ಶರದ್ ಪವಾರ್ ಅವರು ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸಬಹುದು . ಆದರೆ , ನಾಯಕತ್ವದ ಪ್ರಶ್ನೆ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವ ವಹಿಸುತ್ತದೆ ಎಂದು ನಿರೀಕ್ಷಿಸಿದರೆ,ಅದು ರಾಷ್ಟ್ರೀಯ ಅಧ್ಯಕ್ಷರಿಲ್ಲದ ಪಕ್ಷವಾಗಿದೆ ‘ ಎಂದು ತಿಳಿಸಿದೆ.

Share this on:
error: Content is protected !!