ಬೆಂಗಳೂರು:ಉಚಿತ ಲಸಿಕೆ ನೀಡಿದ್ದಕ್ಕಾಗಿ ಸ್ಥಳೀಯ ಭಾಷೆಗಳಲ್ಲಿ ಮೋದಿಗೆ ಧನ್ಯವಾದ ಸೂಚಿಸುವ ಪೋಸ್ಟರ್ಗಳನ್ನು ಬ್ಯಾಂಕ್ ಶಾಖೆಗಳಲ್ಲಿ ಮತ್ತು ಎಟಿಎಂ ಕೌಂಟರ್ಗಳಲ್ಲಿ ಪ್ರದರ್ಶಿಸಲು ಆದೇಶ ಹೊರಡಿಸಲಾಗಿದ್ದು, ದೇಶದ ಎಲ್ಲ ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ನಿರ್ದೇಶನ ನೀಡಿದೆ.

ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಬ್ಯಾಂಕುಗಳನ್ನು ರಾಜಕೀಯ ಪ್ರಚಾರ ಸಾಧನವಾಗಿ ಬಳಸುತ್ತಿರುವ ಬಗ್ಗೆ ಕೇಂದ್ರ ಸರ್ಕಾರವನ್ನು ಬ್ಯಾಂಕಿಂಗ್ ವಲಯ ಟೀಕಿಸಿದೆ.
ಲಸಿಕೆಗಳ ವಿತರಣೆ ಸೇರಿದಂತೆ ತಡೆಗಟ್ಟುವ ಕ್ರಮಗಳು ಪ್ರಜಾಪ್ರಭುತ್ವ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಬ್ಯಾಂಕ್ ನೌಕರರ ಒಕ್ಕೂಟ ಹೇಳಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಎಲ್ಲಾ ಸಮಯದಲ್ಲೂ ಉಚಿತ ಲಸಿಕೆಗಳನ್ನು ನೀಡುವ ನೀತಿಯನ್ನು ಭಾರತ ಹೊಂದಿದೆ.ಈ ಹಿಂದಿನ ಎಲ್ಲಾ ಸರಕಾರಗಳು ಅದನ್ನು ಮಾಡಿದೆ.ಕೇಂದ್ರ ಸರ್ಕಾರವು ಈ ಜವಬ್ದಾರಿಯಿಂದ ಹಿಂದೆ ಸರಿಯಿತು, ಆದರೆ ಸಾಮೂಹಿಕ ಒತ್ತಡ ಮತ್ತು ಸುಪ್ರೀಂ ಕೋರ್ಟ್ ಆದೇಶ ಬಂದಾಗ ಮಾತ್ರ ಲಸಿಕೆಯನ್ನು ಉಚಿತವಾಗಿ ನೀಡಲು ಕೇಂದ್ರ ಮುಂದಾಗಿದೆ.

“ಬ್ಯಾಂಕುಗಳನ್ನು ರಾಜಕೀಯ ಪ್ರಚಾರದ ವೇದಿಕೆಯನ್ನಾಗಿ ಮಾಡುವ ಕ್ರಮವು ಅತ್ಯಂತ ಖಂಡನೀಯ ಮತ್ತು ಆದೇಶವನ್ನು ಹಿಂತೆಗೆದುಕೊಳ್ಳಬೇಕು” ಎಂದು ಬ್ಯಾಂಕುಗಳ ಒಕ್ಕೂಟ ಅಭಿಪ್ರಾಯಪಟ್ಟಿದೆ.