ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 50 ರೂ.ಗೆ ಇಳಿಸಲಾಗುವುದು ಎಂದು ಈ ಹಿಂದೆ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಆದರೆ ಈಗ ಅದು ನಿಜವಾಗಿದೆ. ಎಲ್ಲಿ ಎಂದು ಕೇಳಿದರೆ ಅಚ್ಚರಿ ಪಡುತ್ತೀರಾ…ಪಾಕಿಸ್ತಾನದಲ್ಲಿ ಜೂನ್ 21 ರಂದು ಪೆಟ್ರೋಲ್ ಬೆಲೆ ಕೇವಲ 52.12 ಭಾರತೀಯ ರೂಪಾಯಿ ಮತ್ತು ಡೀಸೆಲ್ ಬೆಲೆ 52.99ರೂ ಆಗಿತ್ತು. ಭಾರತದಲ್ಲಿ ಇಂದು 13 ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ ದಾಟಿದೆ.
ಈ ಸನ್ನಿವೇಶದಲ್ಲಿ, ಆರ್ಥಿಕವಾಗಿ ಭಾರತಕ್ಕಿಂತ ಹಿಂದುಳಿದಿರುವ ನಮ್ಮ ನೆರೆಯ ರಾಷ್ಟ್ರಗಳು ಪೆಟ್ರೋಲ್ ಮತ್ತು ಡೀಸೆಲ್ ನ್ನು ನಮ್ಮಿಂದ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.
ದೇಶದಲ್ಲಿ ತೈಲ ಕಂಪನಿಗಳು ಕಳೆದ 53 ದಿನಗಳಲ್ಲಿ 29 ಬಾರಿ ಬೆಲೆಗಳನ್ನು ಹೆಚ್ಚಿಸಿವೆ. ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬೆಲೆ ಏರಿಕೆಯನ್ನು ಸ್ಥಗಿತಗೊಳಿಸಿದರೂ, ಫಲಿತಾಂಶ ಪ್ರಕಟಣೆಯ ನಂತರ ಮರುದಿನ ಮೇ 4 ರಿಂದ ಮತ್ತೆ ತೈಲ ಬೆಲೆ ಏರಿಕೆಯಾಗಿದೆ.
ಒಂದು ಲೀಟರ್ ಪೆಟ್ರೋಲ್ ಬೆಲೆ ಕೇವಲ 50ರೂ.!!
