ಲಕ್ನೊ: 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಿ.ಆರ್.ಅಂಬೇಡ್ಕರ್ ಅವರ ಸ್ಮಾರಕವನ್ನು ನಿರ್ಮಿಸಲು ಮುಂದಾಗಿದ್ದಾರೆ.ಮಾಜಿ ಮುಖ್ಯಮಂತ್ರಿ ಮಾಯಾವತಿ ನಿರ್ಮಿಸಿದ ಅಂಬೇಡ್ಕರ್ ಸ್ಮಾರಕದ ಪಕ್ಕದಲ್ಲಿ ಕಟ್ಟಡ ಮತ್ತು ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ.
ಅಂಬೇಡ್ಕರ್ ಸಾಂಸ್ಕೃತಿಕ ಕೇಂದ್ರದಲ್ಲಿ 25 ಅಡಿ ಎತ್ತರದ ಅಂಬೇಡ್ಕರ್ ಅವರ ಪ್ರತಿಮೆ, 750 ಆಸನ ಸಾಮರ್ಥ್ಯವಿರುವ ಸಭಾಂಗಣ, ಗ್ರಂಥಾಲಯ, ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರವಿರಲಿದೆ.ಸ್ಮಾರಕದ ನಿರ್ಮಾಣಕ್ಕೆ ಸಂಸ್ಕೃತಿ ಇಲಾಖೆ ಆದೇಶಿಸಿದೆ. ಯುಪಿ ಕ್ಯಾಬಿನೆಟ್ ಶುಕ್ರವಾರ ಸೈಟ್ಗೆ ಅನುಮತಿ ನೀಡಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜೂನ್ 29 ರಂದು ಬೆಳಿಗ್ಗೆ 11ಗಂಟೆಗೆ ಲಕ್ನೊದ ಲೋಕ ಭವನ ಸಭಾಂಗಣದಲ್ಲಿ ಅಂಬೇಡ್ಕರ್ ಸಾಂಸ್ಕೃತಿಕ ಕೇಂದ್ರದ ಅಡಿಪಾಯ ಹಾಕಲಿದ್ದಾರೆ. ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ರಾಜ್ಯಪಾಲ ಆನಂದಿಬೆನ್ ಪಟೇಲ್ ರವರು ಭಾಗವಹಿಸಲಿದ್ದಾರೆ.