ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ ಮತ್ತು ನ್ಯಾಯಾಂಗ ವ್ಯವಸ್ಥೆಯು ಪರಿಣಾಮಕಾರಿಯಾಗಿ ಯಾವುದೇ ಪ್ರಕರಣಗಳನ್ನು ಇತ್ಯರ್ಥ ಗೊಳಿಸುವುದರಲ್ಲಿ ವಿಫಲವಾಗುತ್ತಿದೆ. ಕೌಟುಂಬಿಕ ಕಲಹವೂ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ.
ದೇಶದೆಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಸಮಯದಲ್ಲಿ, ಈ ಪ್ರಕ್ರಿಯೆಯು ಕ್ಷುಲ್ಲಕ ಪ್ರಕರಣಗಳಿಗೆ ಸೀಮಿತವಾಗಿದೆ. ಸರ್ಕಾರದ ಕ್ರಮ ಬಲವಾಗಿಲ್ಲದ ಕಾರಣ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳುತ್ತಿದ್ದಾರೆ.
ಪೊಲೀಸರ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಿದಂತೆ ಬರೀ ಕೇರಳ ರಾಜ್ಯದಲ್ಲಿ ಮಾತ್ರ , 2021 ರ ಏಪ್ರಿಲ್ ವರೆಗೆ ಮಹಿಳೆಯರ ಮೇಲಿನ 4707 ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 1080 ಪ್ರಕರಣಗಳು ಪತಿ ಮತ್ತು ಸಂಬಂಧಿಕರ ಹೆಸರಿನಲ್ಲಿವೆ. 2021 ರ ಜನವರಿಯಲ್ಲಿ 457 ಕೌಟುಂಬಿಕ ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ.