Latest Posts

ಕೋವಿಡ್ ಮೂರನೇ ಅಲೆ ನಿಬಾಯಿಸಲು 100 ಕೋಟಿ ಬಿಡುಗಡೆಗೊಳಿಸಿದ ತಮಿಳುನಾಡು ಸಿಎಂ

ಚೆನ್ನೈ, ಜೂ.29: ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಆಮ್ಲಜನಕ ಸಂಗ್ರಹಿಸಲು ಮತ್ತು ಸಂಭವನೀಯ ಕೋವಿಡ್ ಮೂರನೇ ಅಲೆ ನಿಭಾಯಿಸಲು ಮುನ್ನೆಚ್ಚರಿಕೆ ದೃಷ್ಟಿಯಿಂದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ‘ ಮುಖ್ಯಮಂತ್ರಿ ಸಾರ್ವಜನಿಕ ಪರಿಹಾರ ನಿಧಿ’ಯಿಂದ ( ಸಿಎಂಪಿಆರ್‌ಎಫ್ ) 100 ಕೋಟಿ ಮಂಜೂರು ಮಾಡಿದ್ದಾರೆ.ಮುಖ್ಯಮಂತ್ರಿಯಾಗಿ ಅಧೀಕಾರ ವಹಿಸಿಕೊಂಡ ಬೆನ್ನಲ್ಲೇ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿ ಪ್ರಶಂಸೆಗೆ ಪಾತ್ರರಾಗಿದ್ದರು.

ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಕಾರ್ಯಕ್ಕೆ ದಾನಿಗಳಿಂದ ಸರ್ಕಾರವು ಇಲ್ಲಿಯವರೆಗೆ 353 ಕೋಟಿ ಸಂಗ್ರಹಿಸಿದೆ.ಸರ್ಕಾರಕ್ಕೆ ದೇಣಿಗೆ ನೀಡುವಂತೆ ಸ್ಟಾಲಿನ್‌ ಜನರಲ್ಲಿ ಮನವಿ ಮಾಡಿಕೊಂಡಿದ್ದರು.

ಈ ಮೊತ್ತದಿಂದ ವಿದೇಶಗಳಿಂದ ಆಮ್ಲಜನಕ ಸಿಲಿಂಡರ್‌ಗಳು , ಕನ್ನನ್ನೇಟರ್‌ಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ಸರ್ಕಾರ ಈಗಾಗಲೇ 741.40 ಕೋಟಿ ಬಿಡುಗಡೆ ಮಾಡಿದೆ . ಕಪ್ಪು ಶಿಲೀಂಧ್ರ ರೋಗದ ಚಿಕಿತ್ಸೆಗಾಗಿ ಆಂಫೊಟೆರಿಸಿನ್ ಔಷಧ ಸೇರಿದಂತೆ ಜೀವ ರಕ್ಷಕ ಔಷಧಿಗಳನ್ನು ಖರೀದಿಸಲು ಈಗಾಗಲೇ 25 ಕೋಟಿ ಅಧಿಕ ಹಣ ಬಿಡುಗಡೆ ಮಾಡಲಾಗಿದೆ.

“ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಾದ ಆಮ್ಲಜನಕವನ್ನು ಖರೀದಿಸಲು 100 ಕೋಟಿ ಮೀಸಲಿಡಲು ಮತ್ತು ಮೂರನೇ ಅಲೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಆರಂಭಿಸಲು ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ,’ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

Share this on:
error: Content is protected !!