ಹಲವಾರು ಪ್ರಶಂಸನೀಯ ಸೇವೆಗಳನ್ನು ಸಲ್ಲಿಸಿ ರಾಷ್ಟಪತಿಗಳ ಪೋಲೀಸ್ ಪದಕ ಗಿಟ್ಟಿಸಿರುವ ಕಾಂತ್ ಕೇರಳ ಪೋಲೀಸ್ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.
ಕೇವಲ ಏಳು ತಿಂಗಳ ಸರ್ವೀಸ್ ಇರುವ ಕಾಂತ್ ರವರು ರಾಜ್ಯ ಪೋಲೀಸ್ ಮುಖ್ಯಸ್ಥರ ನೇಮಕಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳ ಪ್ರಕಾರ ವಿಸ್ತರಣೆ ಕೂಡ ಪಡೆಯಬಹುದು.
ಹಿರಿಯ ಐಪಿಎಸ್ ಅಧಿಕಾರಿ ಅನಿಕ್ ಕಾಂತ್ ಅವರು ಕೇರಳ ಪೋಲೀಸರ ನೂತನ ಮುಖ್ಯಸ್ಥರಾಗಲಿದ್ದು,ಬುಧವಾರ ನಿವೃತ್ತರಾದ ಈಗಿನ ಡಿಜಿಪಿ ಲೋಕನಾಥ್ ಬೆಹೆರಾ ರವರ ಉತ್ತರಾಧಿಕಾರಿಯಾಗಲಿದ್ದಾರೆಂದು ಸರ್ಕಾರಿ ಮೂಲಗಳು ತಿಳಿಸಿವೆ.
1988ರ ಬ್ಯಾಚ್ ಅಧಿಕಾರಿಯಾಗಿದ್ದ ಕಾಂತ್ ಪ್ರಸ್ತುತ ರಸ್ತೆ ಸುರಕ್ಷತಾ ಆಯುಕ್ತರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕೇಂದ್ರ ಸಾರ್ವಜನಿಕ ಸೇವಾ ಆಯೋಗ (UPSC) ಶಿಫಾರಸು ಮಾಡಿದ ಅಧಿಕಾರಿಗಳ ಪಟ್ಟಿಯಿಂದ ಕಾಂತ್ ಅವರನ್ನು ಉನ್ನತ ಹುದ್ದೆಗೆ ಆಯ್ಕೆಮಾಡಲಾಗಿದೆ ಎಂದು ತಿಳಿಸಿದರು.
ತನ್ನ ವೃತ್ತಿಜಿವನುದ್ದಕ್ಕೂ ಯಾವಾಗಲೂ ತಳಮಟ್ಟದಲ್ಲಿರುವ ಹುದ್ದೆಯನ್ನು ಆಯ್ಕೆಮಾಡಿಕೊಳ್ಳುತಿದ್ದ ಕಾಂತ್ ರವರ ಆಯ್ಕೆಯು ಅನೇಕರಿಗೆ ಆಶ್ಚರ್ಯವನ್ನುಂಟುಮಾಡಿದೆ.
ಏಕೆಂದರೆ ಮಾಧ್ಯಮಗಳೆಲ್ಲಾ ವಿಜಿಲೆನ್ಸ್ ನಿರ್ಧೇಶಕರಾದ ಸುದೇಶ್ ಕುಮಾರ್ ಹಾಗೂ ಅಗ್ನಿಶಾಮಕ ದಳ ಮತ್ತು ವಿಪತ್ತು ರಕ್ಷಣಾ ನಿರ್ದೇಶಕ ಜನರಲ್ ಬಿ ಸಂಧ್ಯಾ ರವರ ಹೆಸರುಗಳನ್ನು ಸೂಚಿಸಿ ಪ್ರಸಾರ ಮಾಡಿತ್ತು.
ಕಾಂತ್ ರವರು ದಕ್ಷಿಣ ರಾಜ್ಯದ ಪೋಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ದಲಿತ ಅಧಿಕಾರಿ ಎಂದು ಪರಿಗಣಿಸಲಾಗಿದೆ.
ಕಾಂತ್ ರವರು ನವದೆಹಲಿಯಿಂದ ಬಂದು ಉತ್ತರ ವಯನಾಡ್ ಜಿಲ್ಲೆಯಲ್ಲಿ ಸಹಾಯಕ ಅಧೀಕ್ಷಕರಾಗಿ ಕೇರಳ ಕೇಡರ್ ನಲ್ಲಿ ತನ್ನ ಪೋಲೀಸ್ ವೃತ್ತಿಜೀವನ ಆರಂಭಿಸಿದ್ದರು.
ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹದಳ,ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳು,ಮತ್ತು ಅಗ್ನಿ ಶಾಮಕ ದಳದ ಮುಖ್ಯಸ್ಥರಾಗಿ ಸೇರಿದಂತೆ ಅನೇಕ ಹುದ್ದೆಗಳಲ್ಲಿ ಸೇವೆ ಮಾಡುವ ಮೊದಲು ಗುಪ್ತಚರ ಬ್ಯೂರೋ ದಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.