Latest Posts

ಒಂದುವಾರದೊಳಗೆ ಎಲ್ಲಾ ಅಶ್ಲೀಲ ವಿಷಯಗಳನ್ನು ತೆಗೆದುಹಾಕುವಂತೆ ಟ್ವಿಟ್ಟರ್ ಗೆ ಎನ್ ಸಿ ಡಬ್ಲ್ಯು ಆದೇಶ

ಮಕ್ಕಳ ವಿಷಯವಾಗಿ ಅಶ್ಲೀಲಕರವಾದ ವಿಷಯಗಳ ಪ್ರಸಾರ ಮಾಡುವುದರ ವಿರುದ್ದ ಕೈಗೊಂಡ ಕ್ರಮಗಳ ಕುರಿತು ವಿವರಣೆಗಳನ್ನು ಕೇಳಿ ಮಂಗಳವಾರ ದೆಹಲಿ ಪೋಲೀಸರು ಟ್ಟಿಟ್ಟರ್ ಗೆ ನೋಟೀಸ್ ಕಳುಹಿಸಿದ್ದರು.

ಮಹಿಳೆಯರ ಬಗ್ಗೆ ಇರುವ ಅಶ್ಲೀಲಕರವಾದ ವಿಷಯಗಳನ್ನು ಒಂದು ವಾರದೊಳಗೆ ತನ್ನ ವೇಧಿಕೆಯಿಂದ ತೆಗೆದುಹಾಕುವಂತೆ ಟ್ವಿಟ್ಟರ್ ಇಂಡಿಯಾ ವ್ಯವಸ್ಥಾಪಕರಿಗೆ ರಾಷ್ಟ್ರೀಯ ಮಹಿಳಾ ಆಯೋಗ(NCW) ಸೂಚನೆ ನೀಡಿದೆ.
ಮಹಿಳಾ ಆಯೋಗ ಅಧ್ಯಕ್ಷೆರಾದ ರೇಖಾ ಶರ್ಮಾ ರವರು ದೆಹಲಿ ಪೋಲೀಸ್ ಆಯುಕ್ತರಿಗೆ ಪತ್ರ ಬರೆದು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನಾತ್ಮಕ ಕ್ರಮಕೈಗೊಳ್ಳಬೇಕೆಂದು ಕೋರಿದ್ದಾರೆ.

ಟ್ವಿಟ್ಟರ್ ನಲ್ಲಿ ಅಶ್ಲೀಲಕರವಾದ ವಿಷಯಗಳನ್ನು ಪ್ರಸಾರ ಮಾಡುವ ಫ್ರೋಪೈಲ್ ಗಳ ಕುರಿತು ಪ್ರಸ್ತಾಪ ಮಾಡಿ ಅಂತಹ ಎಲ್ಲಾ ಪ್ರಸಾರಗಳನ್ನು ಒಂದು ವಾರದೊಳಗೆ ಟ್ವಿಟ್ಟರ್ ನಿಂದ ತೆಗೆದುಹಾಕಲು ಒಂದುವಾರದ ಗಡುವು ನೀಡಿರುವ ಕುರಿತು ಅಧ್ಯಜ್ಷೆರಾದ ರೇಖಾ ಶರ್ಮಾ ಪತ್ರ ಬರೆದಿರುವುದಾಗಿ ಮಹಿಳಾ ಸಮಿತಿಯು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮೊದಲು ಇಂತಹ ವಿಷಯಗಳ ಕುರಿತು ಮಹಿಳಾ ಆಯೋಗಕ್ಕೆ ದೂರು ಬಂದಿದ್ದು ಅದನ್ನು ಸಮಿತಿಯು ಟ್ವಿಟ್ಟರ್ ಗಮನಕ್ಕೆ ತಂದಿತ್ತು ಆದರೆ ಟ್ವಿಟ್ಟರ್ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಮಿತಿಯು ಅಸಮಧಾನ ವ್ಯೆಕ್ತಪಡಿಸಿತು.

ಆಯೋಗವು ಅಂತಹ ವಿಷಯಗಳನ್ನು ಪ್ರಸಾರ ಮಾಡುವ ಫ್ರೋಪೈಲ್ ಗಳನ್ನು ಗುರುತಿಸಿ ಅದರ ಎಲ್ಲಾ ವಿವರಣೆಗಳೊಂದಿಗೆ ಟ್ವಿಟ್ಟರ್ ನಿಂದ ತೆಗೆದುಹಾಕಲು ಒಂದುವಾರದೊಳಗೆ ಗಡುವು ನೀಡಿದ್ದು ಹಾಗೂ ಇದರ ಕುರಿತು ತೆಗೆದುಕೊಂಡ ಕ್ರಮಗಳ ಕುರಿತಾಗಿ ವಿವರಣೆ ನೀಡಲು ಕೋರಿದೆ.

ಭಾರತೀಯ ಕಾನೂನುಗಳನ್ನು ಮಾತ್ರವಲ್ಲದೇ ಟ್ವಿಟ್ಟರ್ ನ ಸ್ವತಃ ನೀತಿಗಳನ್ನು ಉಲ್ಲಂಘಿಸಿರುವ ಇಂತಹ ಫ್ರೋಪೈಲ್ ಗಳ ವಿರುದ್ದ ಯಾವುದೇ ಕ್ರಮಗೊಳ್ಳದಿರುವುದು ಹೆಚ್ಚು ತೊಂದರೆ ಉಂಟುಮಾಡುತ್ತಿದೆ ಎಂದು ಸಮಿತಿಯು ಆಕ್ರೋಶ ವ್ಯೆಕ್ತಪಡಿಸಿದೆ.

ಈ ಪ್ರಕರಣದ ವಿಷಯವಾಗಿ ಮಾತನಾಡಿರುವ ಟ್ವಿಟ್ಟರ್ ವಕ್ತಾರರು,ಟ್ಟಿಟ್ಟರ್ ಮಕ್ಕಳ ಲೈಂಗಿಜ ಶೋಷಣೆ (CSC) ಯ ಶೂನ್ಯ ಸಹಿಷ್ಣು ನೀತಿಗಳೊಂದಿಗಿದ್ದು ,ನಿಯಮಗಳನ್ನು ಉಲ್ಲಂಘಿಸುವ ಆಯಾ ಪ್ರೋಪೈಲ್ ಗಳನ್ನು ಪತ್ತೆಹಚ್ಚಲು, ಮತ್ತು ಅದರ ವಿರುದ್ದ ಕ್ರಮಕೈಗೊಳ್ಳುವ ವಿಷಯವಾಗಿ ಸದಾ ಕಾರ್ಯನಿರ್ವಹಿಸುತಿದ್ದು, ಭಾರತ ಕಾನೂನುನಿಯಮ ಜಾರಿ ಹಾಗೂ NGO ಗಳೊಟ್ಟಿಗೆ ಸಹಕರಿಸಿ ಕೆಲಸಮಾಡುವೆವು ಎಂದು ಹೇಳಿದೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಮರಕ್ಷಣಾ ಆಯೋಗ (NCPCR) ವಿಷಯಕ್ಕೆ ಸಂಬಂಧಪಟ್ಟಂತೆ ದೆಹಲಿ ಪೋಲೀಸರಿಗೆ ದೂರು ನೀಡಿದ್ದರಿಂದ ಇದರ ವಿರುದ್ದ ತೆಗೆದುಕೊಂಡ ಕ್ರಮಗಳ ವಿವರಣೆ ಕೇಳಿ ಪೋಲೀಸರು ಟ್ವಿಟ್ಟರ್ ಗೆ ನೋಟೀಸ್ ಜಾರಿ ಮಾಡಿದೆ.

Share this on:
error: Content is protected !!