Latest Posts

ಅಡುಗೆ ಅನಿಲ ಸಿಲಿಂಡರ್ ಮತ್ತೆ 25.50 ರೂ ಹೆಚ್ಚಳ : ಇಂದಿನಿಂದಲೇ ದರ ಜಾರಿ

ನವದೆಹಲಿ: ಇಂದಿನಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರಕಾರ ಮತ್ತು ತೈಲ ಕಂಪನಿಗಳು ಗೃಹ ಬಳಕೆಯ ಅಡುಗೆ ಅನಿಲದ ಪ್ರತೀ ಸಿಲಿಂಡರ್ ಬೆಲೆಯಲ್ಲಿ ₹25.50 ಹೆಚ್ಚಳ ಮಾಡಿವೆ.ದಿನದಿಂದ ದಿನಕ್ಕೆ ಅಡುಗೆ ಅನಿಲ ಸಿಲಿಂಡರ್ ದುಬಾರಿಯಾಗುತ್ತಿವೆ.

14.2 ಕೆಜಿ ತೂಕದ ಸಿಲಿಂಡರ್ ಬೆಲೆ ದೆಹಲಿಯಲ್ಲಿ ₹834.50 ಆಗಿದೆ.ಇತ್ತ , 19 ಕೆಜಿ ಸಿಲಿಂಡರ್ ಬೆಲೆಯಲ್ಲೂ ಸಹ ₹76 ಹೆಚ್ಚಿಸಲಾಗಿದ್ದು 1,550 ಆಗಿದೆ.ಮುಂಬೈ ಮತ್ತು ಕೋಲ್ಕತ್ತಾದಲ್ಲೂ ಸಿಲಿಂಡರ್ ಬೆಲೆ ₹834.50 ಆಗಿದ್ದು , ಚೆನ್ನೈನಲ್ಲಿ ಒಂದು ಎಲ್‌ಪಿಜಿ ಸಿಲಿಂಡರ್‌ಗೆ ₹850.50 ಆಗಿದೆ.

ಫೆಬ್ರವರಿಯಲ್ಲಿ ಮಾತ್ರ ಎಲ್‌ಪಿಜಿ ಬೆಲೆಗಳನ್ನು ಮೂರು ಬಾರಿ ಹೆಚ್ಷಿಸಲಾಗಿದೆ. ಫೆಬ್ರವರಿ 4 ರಂದು ಸಿಲಿಂಡರ್‌ಗೆ 125 , ಫೆಬ್ರವರಿ 15 ರಂದು 50 ಮತ್ತು ಫೆಬ್ರವರಿ 25 ರಂದು 125 ಹೆಚ್ಚಳವಾಗಿತ್ತು.ಮಾರ್ಚ್‌ನಲ್ಲಿ ಮತ್ತೆ ₹25 ರಷ್ಟು ಹೆಚ್ಚಿಸಲಾಗಿತ್ತು.ಚುಣಾವಣಾ ಸಂಧರ್ಭದಲ್ಲಿ ಒಂದು ಬಾರಿ ಮಾತ್ರ ₹10 ಬೆಲೆಯನ್ನು ಕಡಿತಗೊಳಿಸಲಾಗಿತ್ತು.

Share this on:
error: Content is protected !!