Latest Posts

ಮುಸ್ಲಿಮರಿಂದ ದೇವಸ್ಥಾನಕ್ಕೆ ವಾಟರ್ ಕೂಲರ್ ಕೊಡುಗೆ ; ನಾಮ ಫಲಕವನ್ನು ಒಡೆದ ಭಜರಂಗದಳ ಕಾರ್ಯಕರ್ತರು

ಉತ್ತರ ಪ್ರದೇಶದ ಅಲಿಘಡ್ ನ ದೇವಾಲಯವೊಂದಕ್ಕೆ ವಾಟರ್ ಕೂಲರ್ ಕೊಡುಗೆ ನೀಡಿದ ವ್ಯಕ್ತಿಯ ಹೆಸರಿನೊಂದಿಗೆ ಕೆತ್ತಿದ ಫಲಕವನ್ನು ಭಜರಂಗದಳದ ಕಾರ್ಯಕರ್ತರು ಒಡೆದಿದ್ದಾರೆ. ಮುಸ್ಲಿಂ ವ್ಯಕ್ತಿಯ ಹೆಸರಿನೊಂದಿಗೆ ಕೆತ್ತಿದ ಫಲಕವನ್ನು ನಮಗೆ ಬೇಡ ಎಂದು ಭಜರಂಗದಳದ ಕಾರ್ಯಕರ್ತರು ದೇವಸ್ಥಾನಕ್ಕೆ ನುಗ್ಗಿ ಫಲಕವನ್ನು ಒಡೆದರು.

ದೇವಾಲಯದ ಗೋಡೆಯ ಮೇಲೆ ಮತ್ತೊಂದು ಸಮುದಾಯದ ವ್ಯಕ್ತಿಯ ಹೆಸರಿನೊಂದಿಗೆ ಕೆತ್ತಿದ ಫಲಕವನ್ನು ಇಡುವುದು ಎಂದಿಗೂ ಸ್ವೀಕಾರಾರ್ಹವಲ್ಲ ಎಂದು ಭಜರಂಗದಳದ ನಾಯಕ ಕರಣ್ ಚೌಧರಿ ಹೇಳಿದರು. ಅವರು ಫಲಕವನ್ನು ಅನ್ನು ಸುತ್ತಿಗೆಯಿಂದ ಒಡೆಯುವ ದೃಶ್ಯ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು.

ಫಲಕವನ್ನು ಒಡೆದವರ ವಿರುದ್ಧ ದೇವಾಲಯ ಸಮಿತಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, ಸಮಾಜ ವಿರೋಧಿಗಳ ಗುಂಪು ದೇವಾಲಯಕ್ಕೆ ನುಗ್ಗಿ ಫಲಕವನ್ನು ಒಡೆದಿದೆ ಎಂದು ಹೇಳಿದೆ ದೇವಾಲಯ ಆಡಳಿತದ ಅಧ್ಯಕ್ಷ ಸತ್ಯಪಾಲ್ ಸಿಂಗ್ ಅವರು ಭಜರಂಗದಳದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.

ವಾಟರ್ ಕೂಲರ್ ಅನ್ನು ದೇವಾಲಯಕ್ಕೆ ಸಮಾಜವಾದಿ ಪಕ್ಷದ ಮುಖಂಡ ಸಲ್ಮಾನ್ ಶಾಹಿದ್ ಕೊಡುಗೆ ನೀಡಿದ್ದಾರೆ . ಶಾಹಿದ್ ಎಸ್‌ಪಿ ಯುವ ವಿಭಾಗದ ರಾಜ್ಯ ಕೋಶಾದಿಕಾರಿ ಆಗಿದ್ದಾರೆ ಅಲಿಘಡ್
ನ ದೇವಾಲಯಗಳು ಮತ್ತು ಚರ್ಚುಗಳಲ್ಲಿ 100 ವಾಟರ್ ಕೂಲರ್‌ಗಳನ್ನು ಅಳವಡಿಸಲು ಅವರು ನಿರ್ಧರಿಸಿದ್ದಾರೆ. ಕೆಲವರು ಇದಕ್ಕೆ ಕೋಮು ಬಣ್ಣವನ್ನು ನೀಡುತ್ತಿದ್ದು ಆಘಾತಕ್ಕೊಳಗಾಗಿದ್ದೇನೆ ಎಂದು ಶಾಹಿದ್ ಹೇಳಿದರು.

Share this on:
error: Content is protected !!